ಕಣ್ಣೂರು: ಶ್ರೀಕಂಠಪುರಂನ ವಳಕೈ ಎಂಬಲ್ಲಿ ಖಾಸಗಿ ಶಾಲಾ ವಾಹನ ಮಗುಚಿಬಿದ್ದು, ಒಬ್ಬಕೆ ವಿದ್ಯಾರ್ಥಿನಿ ಮೃತಪಟ್ಟಿದ್ದು, 13ಮಂದಿ ಗಾಯಗೊಂಡಿದ್ದಾರೆ. ಶಾಲೆಯ ಐದನೇ ತರಗತಿ ವಿದ್ಯಾರ್ಥಿನಿ ನೇದ್ಯ ಎಸ್. ರಾಜೇಶ್(11)ಮೃತಪಟ್ಟ ಬಾಲಕಿ.
ಬುಧವಾರ ಸಂಜೆ ಶಾಲೆಬಿಟ್ಟು ಮಕ್ಕಳನ್ನು ಕರೆದೊಯ್ಯುವ ಮಧ್ಯೆ ಸರ್ವೀಸ್ ರಸ್ತೆಯಿಂದ ಮುಖ್ಯ ರಸ್ತೆಗೆ ವಾಹನ ಸಂಚರಿಸುತ್ತಿದ್ದಂತೆ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಈ ಸಂದರ್ಭ ನೇದ್ಯ ಬಸ್ಸಿನಿಂದ ಹೊರಕ್ಕೆ ಬಿದ್ದು, ಬಸ್ಸಿನಡಿ ಸಿಲುಕಿಕೊಂಡಿದ್ದಳು. ಬಸ್ಸಿನಲ್ಲಿ ಚಾಲಕ, ಆಯಾ ಸೇರಿದಂತೆ ಒಟ್ಟು 19ಮಂದಿ ಇದ್ದರು. ಗಾಯಾಳುಗಳಲ್ಲಿ ಒಬ್ಬಾಕೆ ವಿದ್ಯಾರ್ಥಿನಿ ಸ್ಥಿತಿ ಗಂಭೀರವಾಗಿದೆ. ಗಾಯಾಳು ವಿದ್ಯಾರ್ಥಿಗಳನ್ನು ತಳಿಪರಂಬದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಬಸ್ಸಿನಲ್ಲದ್ದವರು ನಾಲ್ಕರಿಂದ 11ವರ್ಷ ವಯಸ್ಸಿನ ವಿದ್ಯಾರ್ಥಿಗಳಾಗಿದ್ದರು.