ಕಾಸರಗೋಡು: ಜನವರಿ ಒಂದು 2025 ನ್ನು ಆಧಾರವಾಗಿಟ್ಟು ಮತದಾರರ ಹೊಸ ಪಟ್ಟಿಯನ್ನು ಪ್ರಕಟಿಸಲಾಗಿದೆ. ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ರಾಷ್ಟ್ರೀಯ ಪಕ್ಷದ ಪ್ರತಿನಿಧಿಗಳಿಗೆ ಜಿಲ್ಲಾ ಚುನಾವಣಾ ಅಧಿಕಾರಿಯೂ ಜಿಲ್ಲಾಧಿಕಾರಿಯೂ ಆದ ಕೆ.ಇನ್ಭಾಶೇಖರ್ ಮತದಾರರ ಪಟ್ಟಿಯನ್ನು ಹಸ್ತಾಂತರಿಸಿದರು.
ಸಭೆಯಲ್ಲಿ ರಾಷ್ಟ್ರೀಯ ಪಕ್ಷದ ಪ್ರತಿನಿಧಿಗಳಾದ ಎಂ.ಕುಂಞಂಬು ನಂಬ್ಯಾರ್, ಅಬ್ದುಲ್ಲ ಕುಂಞÂ ಚೆರ್ಕಳ ಅವರು ಚುನಾವಣಾ ಉಪ ಜಿಲ್ಲಾಧಿಕಾರಿಯವರ ಜವಾಬ್ದಾರಿ ನಿರ್ವಹಿಸುವ ಎಡಿಎಂ ಪಿ. ಅಖಿಲ್, ಉದುಮ ಕ್ಷೇತ್ರ ಇಆರ್‍ಒ ರವರ ಜವಾಬ್ದಾರಿಯನ್ನು ವಹಿಸುವ ಉಪ ಜಿಲ್ಲಾಧಿಕಾರಿ ವಿನೋದ್, ಜಿ.ಮುಲ್ಲಶ್ಶೇರಿಲ್, ಕಿರಿಯ ಅಧೀಕ್ಷಕರಾದ ಮಧು ಕೆ, ಎನ್.ಗಿರೀಶ್ ಕುಮಾರ್ ಮತ್ತು ಚುನಾವಣಾ ವಿಭಾಗದ ಉದ್ಯೋಗಸ್ಥರು ಉಪಸ್ಥಿತರಿದ್ದರು.