ಕೈರೊ: ಗಾಜಾ ಪಟ್ಟಿಯಲ್ಲಿ ಕದನವಿರಾಮ ಘೋಷಿಸುವ ಕುರಿತ ಕರಡು ಒಪ್ಪಂದಕ್ಕೆ ಹಾಗೂ 12 ಒತ್ತೆಯಾಳುಗಳ ಬಿಡುಗಡೆಗೆ ಹಮಾಸ್ ಬಂಡುಕೋರರು ಒಪ್ಪಿದ್ದಾರೆ ಎಂದು ಮಾತುಕತೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಇಬ್ಬರು ಅಧಿಕಾರಿಗಳು ತಿಳಿಸಿದ್ದಾರೆ.
ಮಧ್ಯಸ್ಥಿಕೆ ವಹಿಸಿದ್ದ ಕತಾರ್ ರಾಷ್ಟ್ರವು, 'ಮಾತುಕತೆ ಅಂತಿಮ ಹಂತದಲ್ಲಿದೆ.
ಬಹುತೇಕ ಒಪ್ಪಂದಕ್ಕೆ ಬರಲಾಗುತ್ತದೆ' ಎಂದು ಹೇಳಿದೆ. ಕರಡು ಒಪ್ಪಂದ ಏರ್ಪಟ್ಟಿರು ವುದನ್ನು
ಹಮಾಸ್ ಮತ್ತು ಈಜಿಪ್ಟ್ ಅಧಿಕಾರಿಗಳು ದೃಢಪಡಿಸಿದ್ದಾರೆ. ಒಪ್ಪಂದಕ್ಕೆ ಅಂತಿಮ ಅನುಮೋದನೆ ಕೋರಿ ಇಸ್ರೇಲ್‌ನ ಸಂಪುಟದ ಮುಂದೆ ಮಂಡಿ ಸಲಾಗುವುದು ಎಂದು
ಹೇಳಿದರು.
ಕ್ಷಿಪಣಿ ದಾಳಿ, 30 ಸಾವು: (ಜೆರುಸಲೇಂ): ಗಾಜಾ ಪಟ್ಟಿಯಲ್ಲಿ ಕದನ ಮುಂದುವರಿದಿದ್ದು, ಮಂಗಳವಾರ ಇಸ್ರೇಲ್ ಸೇನೆ ನಡೆಸಿದ ಪ್ರತ್ಯೇಕ ವಾಯುದಾಳಿಯಲ್ಲಿ ಮಕ್ಕಳು ಸೇರಿ 30 ಮಂದಿ ಮೃತಪಟ್ಟಿದ್ದಾರೆ. ಗಾಜಾದ ಡೇರ್ ಅಲ್ ಬಲಾಹ್ ನಗರದ ಕೇಂದ್ರ ಭಾಗವನ್ನು ಗುರಿಯಾಗಿಸಿ ಎರಡು ದಾಳಿ ನಡೆಯಿತು.