ಕಾಸರಗೋಡು: ಇತಿಹಾಸ ಪ್ರಸಿದ್ಧ ಚಕ್ರತೀರ್ಥ ಪುಷ್ಕರಣಿಯ ಮಧ್ವಾಚಾರ್ಯರ್ಯರಿಂದ ಪೂಜಿಸ್ಪಟ್ಟ ವಿಷ್ಣುಮಂಗಲ ಶ್ರೀ ಮಹಾವಿಷ್ಣು ದೇವಸ್ಥಾನದ ವರ್ಷಾವಧಿ ಉತ್ಸವ ಹಾಗೂ ಭಜನಾ ಸಂಘದ 32 ನೇ ವಾರ್ಷಿಕೋತ್ಸವ ಸೋಮವಾರ ಆರಮಬಗೊಂಡಿತು. ದೀಪ ಪ್ರತಿಷ್ಠೆ, ವಿವಿಧ ಭಜನಾ ಸಂಘಗಳಿಂದ ಭಜನೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.
ಜ. 14ರಂದು ಬೆಳಗ್ಗೆ ಗಣಪತಿ ಹೋಮ, ಭಜನೆ, ಮಹಾಪೂಜೆ ಪ್ರಸಾದ ವಿತರಣೆ ಅನ್ನದಾನ ನಡೆಯಲಿದೆ. ಸಂಜೆ ದೀಪಾರಾಧನೆ, ಭಜನೆ, ಉತ್ಸವ ಬಲಿ,ಸುಡುಮದ್ದು ಪ್ರದರ್ಶನ ನಡೆಯಲಿದೆ. 15 ರಂದು ಬೆಳಗ್ಗೆ 7.30 ಕ್ಕೆ ದರ್ಶನ ಬಲಿ, ರಾಜಾಂಗಣ ಪ್ರಸಾದ, ಧೂಮಾವತಿ ದೈವದ ಕೋಲ ನಡೆಯಲಿದೆ. 16 ರಂದು ಶ್ರೀ ಧೂಮಾವತಿ ದೈವದ ಕೋಲ, ಅನ್ನಪ್ರಸಾದ ಜರಗಲಿದೆ.