ಕಾಸರಗೋಡು: ಅಂಗನವಾಡಿಗಳಿಗೆ ಮಿಕ್ಸಿ ವಿತರಣೆ ಯೋಜನೆಯನ್ವಯ ಬದಿಯಡ್ಕ ಗ್ರಾಮ ಪಂಚಾಯತಿ ಒಳಗೊಂಡ 41 ಅಂಗನವಾಡಿಗಳಿಗೆ 2024-25ನೇ ವರ್ಷ ಮಿಕ್ಸಿಗಳನ್ನು ವಿತರಿಸಲು ರೀ ಟೆಂಡರ್ ಆಹ್ವಾನಿಸಲಾಗಿದೆ.
ಫಾರ್ಮ್ ಮಾರಾಟದ ಕೊನೆಯ ದಿನಾಂಕ ಜನವರಿ 13ರಂದು ಮಧ್ಯಾಹ್ನ 12 ಗಂಟೆ ಆಗಿದ್ದು, ಜ.13ರ ಮಧ್ಯಾಹ್ನ 12ಕ್ಕೆ ರೀ ಟೆಂಡರ್ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ. 13ರಂದು ಮಧ್ಯಾಹ್ನ 3ಕ್ಕೆ ರೀ ಟೆಂಡರ್ ತೆರೆಯಲಾಗುವುದು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಬದಿಯಡ್ಕ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಐ.ಸಿ.ಡಿ.ಎಸ್ ಮೇಲ್ವಿಚಾರಕರ ಕಛೇರಿ ದೂರವಾಣಿ ಸಂಖ್ಯೆ(9746924482)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.