ವಾಷಿಂಗ್ ಮಷಿನ್‌ನಲ್ಲಿ ಗಾಢವಾದ ಕಲೆಗಳು, ಕಾಲರ್ ಮೇಲಿನ ಕಲೆಗಳು ಹೋಗುವುದಿಲ್ಲ ಎಂಬ ದೂರು ಇದೆ. ಹಾಗೆ ಕೆಲವೊಂದು ಕೆಲಗಳಿಗೆ ಎಷ್ಟೇ ದುಬಾರಿ ಲಿಕ್ವಿಡ್ ಬಳಸಿದರು ಮಷಿನ್‌ನಲ್ಲಿ ಹೋಗುವುದಿಲ್ಲ ಎಂಬ ಮಾತಿದೆ. ಆದ್ರೆ ನಾವಿಂದು ಹೇಳುವ ಈ ಟ್ರಿಕ್ಸ್ ಬಳಸಿದ್ರೆ ನೀವು ಮಷಿನ್ ಮೂಲಕವೇ ಅದ್ಭುತವಾಗಿ ಕಲೆ ಹೋಗಲಾಡಿಸಬಹುದು. ಹಾಗಾದ್ರೆ ಇದಕ್ಕೆ ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.
ಮಷಿನ್ ಫುಲ್ ಆಗುವಷ್ಟು ಬಟ್ಟೆ ಹಾಕಬಾರದು
ಮಷಿನ್ ಫುಲ್ ಆಗುವಷ್ಟು ಬಟ್ಟೆಯನ್ನು ಮಷಿನ್‌ಗೆ ಹಾಕಿಕೊಂಡು ವಾಷ್ ಮಾಡಬಾರದು. ಇದರಿಂದ ಬಟ್ಟೆ ಸ್ವಚ್ಚ ಆಗುವುದಿಲ್ಲ. ಯಾವಾಗಲು ಸ್ವಲ್ಪ ಸ್ಥಳ ಬಿಟ್ಟು ಬಟ್ಟೆ ಹಾಕಬೇಕು. ಹೈಲೋಡ್ ಆಗಲು ಬಿಡಬಾರದು. 10 ಕೆಜಿ ಸಾಮರ್ಥ್ಯದ ಮಷಿನ್ ಆಗಿದ್ದರೂ 7ರಿಂದ 8 ಕೆಜಿ ಅಷ್ಟು ಬಳಸಬಹುದು. ಹಾಗೆ ಅರ್ಧ ತೊಳೆದ ಬಳಿಕ ಕೊನೆಯಲ್ಲಿ ಲಿಕ್ವಿಡ್ ಅಥವಾ ಪುಡಿಯನ್ನು ಮತ್ತೆ ಹಾಕಿ ಬಿಡಬೇಕು. ಇದರಿಂದ ಬಟ್ಟೆ ಸುಲಭವಾಗಿ ಕ್ಲೀನ್ ಮಾಡಬಹುದು.
ಶರ್ಟ್ ಕಾಲರ್ ಕ್ಲೀನ್ ಮಾಡೋದು ಹೇಗೆ?
ನೀವು ಮಷಿನ್‌ಗೆ ಶರ್ಟ್ ಹಾಕುವಾಗ ಶರ್ಟ್ ಬಟನ್ ಗಳನ್ನು ಹಾಕಿ ಒಳಮೈಯನ್ನು ಹೊರಗೆ ಮಾಡಿಕೊಳ್ಳಿ. ಅನಂತರ ಒಂದು ಬಕೆಟ್‌ನಲ್ಲಿ ಪುಡಿ ಹಾಕಿ ನೆನೆಸಿಟ್ಟು ಅರ್ಧ ಇಲ್ಲದೆ ಒಂದು ಗಂಟೆ ಬಳಿಕ ಮಷಿನ್‌ಗೆ ಹಾಕಿ ತೊಳೆಯಲು ಬಿಟ್ಟರೆ ಸಂಪೂರ್ಣ ಕ್ಲೀನ್ ಆಗುತ್ತದೆ. ನೋವು ಕೂಡ ಒಮ್ಮೆ ಈ ರೀತಿ ಟ್ರಿಕ್ಸ್ ಬಳಸಿ ಶರ್ಟ್ ತೊಳೆದು ನೋಡಿ.
ಗಾಢ ಕಲೆಯನ್ನು ಕೈಯಲ್ಲಿ ಉಜ್ಜಿ ಹಾಕಿ
ಗಾಢವಾದ ಕಲೆಗಳು ಬಟ್ಟೆ ಮೇಲೆ ಇದ್ದರೆ ಅಂತಹ ಬಟ್ಟೆಯನ್ನು ಮೊದಲು ಕೈಯಿಂದ ಸ್ವಲ್ಪ ಉಜ್ಜಿ. ಕಲೆಯ ಮೇಲೆ ಲಿಕ್ವಿಡ್ ಹಾಕಿ ಕೈಯಿಂದ ಉಜ್ಜಿಕೊಂಡು ಬಳಿಕ ಮಷಿನ್‌ಗೆ ಹಾಕಿದರೆ ಕಲೆ ಬಹುಬೇಗ ಬಿಟ್ಟುಕೊಳ್ಳುತ್ತದೆ.
ಮಷಿನ್ ಟಬ್ ಹಾಗೂ ಫಿಲ್ಟರ್ ಕ್ಲೀನ್ ಮಾಡುತ್ತಿರಿ
ವಾಷಿಂಗ್ ಮಷಿನ್‌ನಲ್ಲಿರುವ ಕೆಲಗಿನ ಟಬ್ ಅನ್ನು ಆಗಾಗ ಕ್ಲೀನ್ ಮಾಡಿ. ಮಷಿನ್ ಸಂಪೂರ್ಣ ಒಣಗಿದ ಬಳಿಕ ಒದ್ದೆ ಬಟ್ಟೆ ಮಾಡಿ ಅದನ್ನು ಒರೆಸಿಕೊಳ್ಳಿ. ಹಾಗೆ ಫಿಲ್ಟರ್ ಅನ್ನು 15 ದಿನಕ್ಕೊಮ್ಮೆ ಆದರು ತೆಗೆದು ಕ್ಳೀನ್ ಮಾಡುತ್ತಾ ಇರಿ. ಇದರಿಂದ ಕೂಡ ಬಟ್ಟೆ ಸುಲಭವಾಗಿ ಕ್ಲೀನ್ ಆಗುತ್ತದೆ.