ಎರ್ನಾಕುಳಂ: ತಿರುವನಂತಪುರಂ-ವಂಚಿಯೂರು ರಸ್ತೆಯನ್ನು ಮುಚ್ಚಿ ಪಕ್ಷದ ಸಮ್ಮೇಳನ ನಡೆಸಿದ ನಂತರ ಸಿಪಿಎಂ ಹಿನ್ನಡೆ ಅನುಭವಿಸಿದೆ. ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಹೈಕೋರ್ಟ್ ಸೂಚಿಸಿದೆ. ಗೋವಿಂದನ್ ಜೊತೆಗೆ, ತಿರುವನಂತಪುರಂ ಜಿಲ್ಲಾ ಕಾರ್ಯದರ್ಶಿ ವಿ ಜಾಯ್, ಸಿಪಿಐ ರಾಜ್ಯ ಕಾರ್ಯದರ್ಶಿ ಬಿನೋಯ್ ವಿಶ್ವಂ ಮತ್ತು ಕಡನ್ನÀಂಪಳ್ಳಿ ಸುರೇಂದ್ರನ್ ಅವರಂತಹ ನಾಯಕರನ್ನು ಹಾಜರಾಗುವಂತೆ ಹೈಕೋರ್ಟ್ ನಿರ್ದೇಶಿಸಿದೆ.
ರಾಜಕೀಯ ಪಕ್ಷಗಳು ಸಮ್ಮೇಳನಗಳು ಮತ್ತು ಪಕ್ಷದ ಇತರ ಕಾರ್ಯಕ್ರಮಗಳನ್ನು ನಡೆಸುತ್ತಿರುವುದರಿಂದ ಸಾರ್ವಜನಿಕ ಸಾರಿಗೆಗೆ ಅಡ್ಡಿಯುಂಟಾಗುತ್ತಿರುವ ವಿವಿಧ ಘಟನೆಗಳ ಹಿನ್ನೆಲೆಯಲ್ಲಿ ಹೈಕೋರ್ಟ್‍ನ ನಿರ್ದೇಶನವು ಬಂದಿದೆ. ಕೊಚ್ಚಿ ಕಾರ್ಪೋರೇಷನ್ ಮುಂದೆ ನಡೆದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ನ್ಯಾಯಾಲಯಕ್ಕೆ ಹಾಜರಾಗುವಂತೆ ನ್ಯಾಯಾಲಯ ಆದೇಶಿಸಿದೆ. ಎರ್ನಾಕುಳಂ ಡಿಸಿಸಿ ಅಧ್ಯಕ್ಷ ಮುಹಮ್ಮದ್ ಶಿಯಾಸ್ ಮತ್ತು ಎರ್ನಾಕುಳಂ ಶಾಸಕ ಟಿ ಜೆ ವಿನೋದ್ ಅವರ ಮನವಿಯ ಆಧಾರದಲ್ಲಿ ಸೂಚನೆಗಳನ್ನು ನೀಡಲಾಯಿತು.
ಜಂಟಿ ಮಂಡಳಿ ಸಚಿವಾಲಯದಲ್ಲಿ ನಡೆದ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಸಿಪಿಐ ರಾಜ್ಯ ಕಾರ್ಯದರ್ಶಿ ಮತ್ತು ಇತರರು ವಿಚಾರಣೆಗೆ ಹಾಜರಾಗುವಂತೆ ಹೈಕೋರ್ಟ್ ಆದೇಶಿಸಿದೆ. ಸಿಪಿಎಂ ನಾಯಕರಾದ ಕಡನ್ನಂಪಳ್ಳಿ ಸುರೇಂದ್ರನ್ ಮತ್ತು ವಿ ಪ್ರಶಾಂತ್ ಮತ್ತು ಸಿಪಿಐ ನಾಯಕ ಪಣ್ಯನ್ ರವೀಂದ್ರನ್ ಅವರಿಗೂ ಹಾಜರಾಗಲು ನೋಟಿಸ್ ನೀಡಲಾಗುವುದು.