ಬದಿಯಡ್ಕ: ದೇಶೀಯ ಅಧ್ಯಾಪಕ ಪರಿಷತ್ (ಎನ್.ಟಿ.ಯು.) ಆಶ್ರಯದಲ್ಲಿ ವಿವೇಕಾನಂದ ಜಯಂತಿ ಆಚರಣೆಯನ್ನು ಪರಿಷತ್ತಿನ ಕುಂಬಳೆ ಉಪಜಿಲ್ಲಾ ಅಧ್ಯಕ್ಷ ದಿನೇಶ್ ಮಾಸ್ತರ್ ಕೆಡೆಂಜಿ ಅವರ ವಸತಿಯಲ್ಲಿ ಆಚರಿಸಲಾಯಿತು.
ಎನ್.ಟಿ.ಯು ಕೇರಳ ರಾಜ್ಯ ಸಮಿತಿ ಉಪಾಧ್ಯಕ್ಷ ಪ್ರಭಾಕರನ್ ಮಾಸ್ತರ್ ದೀಪಬೆಳಗಿಸಿ ಉದ್ಘಾಟಿಸಿದರು. ಡಾ. ಶ್ರೀಶಕುಮಾರ ಪಂಜಿತ್ತಡ್ಕ ಸ್ವಾಮಿ ವಿವೇಕಾನಂದರ ಜೀವನ ಮತ್ತು ಸಂದೇಶಗಳ ಕುರಿತು ಬೌದ್ಧಿಕ್ ನಡೆಸಿಕೊಟ್ಟರು. ಪ್ರಸಾದ ಮಾಸ್ತರ್ ಶುಭಾಶಂಸನೆಗೈದರು. ಪುರುಷೋತ್ತಮ ಕುಲಾಲ್ ಸ್ವಾಗತಿಸಿ ಪುಷ್ಪ ಟೀಚರ್ ವಂದಿಸಿದರು.