ಗ್ಯಾಂಗ್ಟಕ್ : ಸಿಕ್ಕಿಂನಲ್ಲಿ 25 ವರ್ಷ ಹಳೆಯ ಬೈಲಿ ಸೇತುವೆ ಶನಿವಾರ ಅಧಿಕ ಭಾರ ತುಂಬಿದ್ದ ಲಾರಿಯೊಂದು ದಾಟುವಾಗ ಕುಸಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಾಚುಂಗ್ ಚು ನದಿಯ ಮೇಲೆ ಇರುವ 200 ಅಡಿ ಸೇತುವೆಯು ಲಾಚುಂಗ್-ಕಟಾವೊ ರಸ್ತೆಯಲ್ಲಿದೆ. ಸೇತುವೆಯು ನದಿಗೆ ಕುಸಿದು ಬೀಳಲಿಲ್ಲ.
ಹೀಗಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಮತ್ತು ಲಾರಿ ಚಾಲಕನನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸೇತುವೆ ದುರಸ್ತಿ ಪಡಿಸುವವರೆಗೆ ಸ್ಥಳೀಯರು ಮತ್ತು ಪ್ರವಾಸಿಗರು ಬದಲಿ ಸೇತುವೆಯನ್ನು ಬಳಸಬಹುದು ಎಂದು ಉತ್ತರ ಸಿಕ್ಕಿಂ ಜಿಲ್ಲಾಡಳಿತದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.