ಬದಿಯಡ್ಕ: ಕಿಡ್ನಿ ಕಸಿ ಶಸ್ತ್ರಕ್ರಿಯೆಯ ನಂತರ ವಿಶ್ರಾಂತಿ ಪಡೆಯುತ್ತಿದ್ದ ಶಿಕ್ಷಕ ಮೃತಪಟ್ಟ ಘಟನೆ ನಡೆದಿದೆ. ಪೆರಡಾಲ ನವಜೀವನ ಹೈಯರ್ ಸೆಕಂಡರಿ ಶಾಲೆಯ ಇಂಗ್ಲಿμï ಶಿಕ್ಷಕ, ಪಿಲಾತ್ತರ ನಿವಾಸಿ ಸತ್ಯದಾಸನ್ ಪಿ.ವಿ(54) ಮೃತಪಟ್ಟವರು. ಕಳೆದ ಎರಡು ವರ್ಷಗಳಿಂದ ಇವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಅದರಂತೆ ಎರ್ನಾಕುಲಂ ಖಾಸಗಿ ಆಸ್ಪತ್ರೆಯಲ್ಲಿ ಡಿಸಂಬರ್ 20 ರಂದು ಇವರ ಕಿಡ್ನಿ ಕಸಿ ಶಸ್ತ್ರಕ್ರಿಯೆ ನಡೆದಿತ್ತು. ಅನಂತರ ಅವರು ವಿಶ್ರಾಂತಿ ಪಡೆಯುತ್ತಿದ್ದರು. ಎರಡು ದಿನಗಳ ಹಿಂದೆ ಇವರಿಗೆ ನ್ಯುಮೋನಿಯ ಕಾಣಿಸಿಕೊಂಡಿದ್ದು ಇಂದು ಬೆಳಗ್ಗೆ ಅವರು ಕೊನೆಯುಸಿರೆಳೆದರು. ಮೃತರು ಪತ್ನಿ ಇಂದಿರಾ, ಪುತ್ರ ಸಾರಂಗ್, ಸಹೋದರ ಸಹೋದರಿಯರಾದ ಮಧುಸೂದನನ್, ರಾಮಚಂದ್ರನ್, ನಾರಾಯಣ, ನಂದಿನಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ನಿಧನಾರ್ಥ ನಿನ್ನೆ ಶಾಲೆಗೆ ರಜೆ ನೀಡಲಾಗಿತ್ತು.