HEALTH TIPS

ನಾಗರಿಕ ಪರಮಾಣು ಸಹಕಾರ ವೃದ್ಧಿಗೆ ಕ್ರಮ: ಸುಲ್ಲಿವಾನ್‌

ನವದೆಹಲಿ: ಭಾರತ ಮತ್ತು ಅಮೆರಿಕದ ಪ್ರಮುಖ ಕಂಪನಿಗಳ ನಡುವೆ ನಾಗರಿಕ ಪರಮಾಣು ಸಹಕಾರವನ್ನು ದೀರ್ಘಕಾಲದಿಂದ ತಡೆಯುತ್ತಿದ್ದ ನಿಯಮಗಳನ್ನು ತೆಗೆದು ಹಾಕಲು ಅಮೆರಿಕ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಜೇಕ್‌ ಸುಲ್ಲಿವಾನ್‌ ಸೋಮವಾರ ಹೇಳಿದರು.

ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ಮತ್ತು ಭಾರತದ ಎನ್‌ಎಸ್‌ಎ ಅಜಿತ್‌ ಡೋಭಾಲ್‌ ಅವರ ಜತೆ ಪ್ರತ್ಯೇಕ ಮಾತುಕತೆ ನಡೆಸಿದ ಬಳಿಕ ಅವರು ಈ ಮಹತ್ವದ ಘೋಷಣೆ ಮಾಡಿದರು.

ಭಾರತ- ಅಮೆರಿಕ ನಡುವೆ ನಾಗರಿಕ ಪರಮಾಣು ಕ್ಷೇತ್ರದಲ್ಲಿ ಸಹಕರಿಸುವ ಕುರಿತ ಮಹತ್ವಾಕಾಂಕ್ಷಿ ಯೋಜನೆ ಕುರಿತು 2005ರಲ್ಲಿ ಆಗಿನ ಪ್ರಧಾನಿ ಮನಮೋಹನ್‌ ಸಿಂಗ್‌ ಮತ್ತು ಅಮೆರಿಕದ ಆಗಿನ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಷ್‌ ಅವರ ಜತೆ ಚರ್ಚೆಯಾಗಿತ್ತು. ಬಳಿಕ ಉಭಯ ದೇಶಗಳ ನಡುವೆ ನಾಗರಿಕ ಪರಮಾಣು ಒಪ್ಪಂದಕ್ಕೆ 2008ರಲ್ಲಿ ಅಂತಿಮ ಮುದ್ರೆ ಬಿದ್ದಿತ್ತು.

ಆದರೆ, ಇಲ್ಲಿಯವರೆಗೂ ನಾಗರಿಕ ಪರಮಾಣು ಕ್ಷೇತ್ರದಲ್ಲಿ ಮಹತ್ವದ ಪ್ರಗತಿ ಕಂಡು ಬಂದಿಲ್ಲ. ಈ ಪಾಲುದಾರಿಕೆಯನ್ನು ಗಟ್ಟಿಗೊಳಿಸಲು ಬೈಡನ್‌ ನೇತೃತ್ವದ ಆಡಳಿತ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಅಂತಿಮಗೊಳಿಸಲಾಗುತ್ತಿದ್ದು, ಶೀಘ್ರದಲ್ಲಿಯೇ ಔಪಚಾರಿಕ ದಾಖಲೆಗಳು ಲಭ್ಯವಾಗಲಿವೆ ಎಂದು ಅವರು ತಿಳಿಸಿದರು.

ಇದರಿಂದ ಉಭಯ ದೇಶಗಳ ನಡುವಿನ ಕಾರ್ಯತಂತ್ರದ ಪಾಲುದಾರಿಕೆ ಮತ್ತು ಶಾಂತಿಯುತ ಪರಮಾಣ ಸಹಕಾರ ವಿಶ್ವಾಸದೊಂದಿಗೆ ಮುಂದುವರಿಯಲಿದೆ. ಇದು ಎರಡೂ ದೇಶಗಳ ಪ್ರಗತಿಗೆ ಸಹಕಾರಿಯಾಗಲಿದೆ ಎಂದರು.

ಇದೇ ಅಲ್ಲದೆ ಎರಡೂ ದೇಶಗಳ ನಡುವಿನ ವಾಣಿಜ್ಯ ಮತ್ತು ನಾಗರಿಕ ಬಾಹ್ಯಾಕಾಶ ಪಾಲುದಾರಿಕೆಯ ಮಹತ್ವದ ಕಡತಗಳಿಗೂ ಬೈಡನ್‌ ಅವರು ಸಹಿ ಹಾಕಲಿದ್ದಾರೆ ಎಂದು ಸುಲ್ಲಿವಾನ್‌ ಮಾಹಿತಿ ನೀಡಿದರು. ಇದು ಕ್ಷಿಪಣಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಹಕಾರವನ್ನು ವೃದ್ಧಿಸಲು ನೆರವಾಗಲಿದೆ ಎಂದು ಹೇಳಿದರು.

‌ಚಿಪ್‌ ತಯಾರಿಕೆ, ಶುದ್ಧ ಇಂಧನ ಮತ್ತು ಇತರ ಅತ್ಯಾಧುನಿಕ ತಂತ್ರಜ್ಞಾನ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಚೀನಾದ 'ಪರಭಕ್ಷಕ ಕೈಗಾರಿಕಾ ತಂತ್ರ'ಗಳನ್ನು ಸುಲ್ಲಿವಾನ್‌ ಇದೇ ವೇಳೆ ಟೀಕಿಸಿದರು. ಈ ಕಾರಣದಿಂದಲೇ ಅಮೆರಿಕದ ಹಲವು ಕಂಪನಿಗಳು ಚಿನಾದಿಂದ ಹೊರಬಂದಿದ್ದು, ಭಾರತದಲ್ಲಿ ತನ್ನ ಚಟುವಟಿಕೆ ವಿಸ್ತರಿಸುತ್ತಿವೆ ಎಂದರು.

ಇದಕ್ಕೆ, ಭಾರತದಲ್ಲಿ 'ಆಪಲ್‌' ಕಂಪನಿಯ ಹೂಡಿಕೆಯೇ ಸ್ಪಷ್ಟ ನಿದರ್ಶನ ಎಂದು ವಿವರಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries