ಕಾಸರಗೋಡು: ಪಾಲಕುನ್ನು ಆರಾಟುಕಡವಿನಲ್ಲಿ 500ರೂ. ಮುಖಬೆಲೆಯ ನಾಲ್ಕು ಕಳ್ಳನೋಟು ಕೈವಶವಿರಿಸಿಕೊಮಡಿದ್ದ ಯುವಕನನ್ನು ಬೇಕಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರಾಟುಕಡವು ಏರೋಲ್ ನಿವಾಸಿ ವಿನೋದ್ ಬಂಧಿತ. ಮೊಬೈಲ್ ಅಂಗಡಿಯೊಮದಕ್ಕೆ ತೆರಳಿ ಮೊಬೈಲ್ ಡಿಸ್‍ಪ್ಲೇ ದುರಸ್ತಿ ನಡೆಸಿದ ಬಳಿಕ ನೀಡಿದ 500ರೂ. ಮುಖಬೆಲೆಯ ನೋಟನ್ನು ಸೂಕ್ಷ್ಮವಾಗಿ ತಪಾಸಣೆ ನಡೆಸಿದಾಗ ಕಳ್ಳನೋಟು ಎಂದು ಪತ್ತೆಯಾಗಿದ್ದು, ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಆದರೆ ಈ ನೋಟು ಬ್ಯಾಂಕಿನಿಂದ ಲಭಿಸಿರುವುದಾಗಿ ಆರೋಪಿ ತಿಳಿಸಿದ್ದು, ಈ ಬಗ್ಗೆ ಪೊಲೀಸರು ಸಮಗ್ರ ತನಿಖೆ ಆರಂಭಿಸಿದ್ದಾರೆ.
ಕಳೆದ ಹಲವು ದಿವಸಗಳಿಂದ ಉದುಮ ಆಸುಪಾಸು ವ್ಯಾಪಕವಾಗಿ ಕಳ್ಳನೋಟು ಚಲಾವಣೆಯಾಗುತ್ತಿರುವುದನ್ನು ಪೊಲಿಸರು ಪತ್ತೆಹಚ್ಚಿದ್ದರು.