ಕಾಸರಗೋಡು: ಪೆರಿಯ ಕಲ್ಯೋಟ್ ನಿವಾಸಿಗಳು ಹಾಗೂ ಯೂತ್ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್(19) ಹಾಗೂ ಶರತ್ ಲಾಲ್(25)ಕೊಲೆ ಪ್ರಕರಣದಲ್ಲಿ ಜೀವಾವಧಿ ಶೀಕ್ಷೆಗೊಳಗಾದ ಪೀತಾಂಬರನ್, ಸಜಿ ಸಿ. ಜಾರ್ಜ್, ಕೆ. ಎಂ ಸುರೇಶ್, ಕೆ.ಎನ್ ಅನಿಲ್‍ಕುಮಾರ್, ಗಿಜಿನ್, ಆರ್.ಶ್ರೀರಾಗ್, ಎ.ಅಶ್ವಿನ್, ಸುಭಿಶ್, ಟಿ. ರಂಜಿತ್ ಹಾಗೂ ಎ.ಸುರೇಂದ್ರನ್ ಅವರನ್ನು ವೀಯೂರ್ ಅಥವಾ ಕಣ್ಣೂರು ಕೇಂದ್ರ ಕರಾಗೃಹಕ್ಕೆ ಕಳುಹಿಸುವ ಬಗ್ಗೆ ಇನ್ನೂ ಅಮತಿಮ ತೀರ್ಮಾನವಾಗಿಲ್ಲ. ಐದು ವರ್ಷಕಾಲ ಜೈಲು ಶಿಕ್ಷೆಗೊಳಗಾಗಿರುವ ಮಾಜಿ ಶಾಸಕ ಕೆ.ವಿ ಕುಞÂರಾಮನ್, ಕಾಞಂಗಾಡು ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಕೆ. ಮಣಿಕಂಠನ್, ರಾಘವನ್ ವೆಳುತ್ತೋಳಿ ಹಾಗೂ ಕೆ.ವಿ ಭಾಸ್ಕರನ್ ಅವರನ್ನೂ ವೀಯೂರ್ ಅಥವಾ ಕಣ್ಣೂರು ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸುವ ಬಗ್ಗೆ ಇನ್ನು ತೀರ್ಮಾನವಾಗಬೇಕಷ್ಟೆ.
ತೀರ್ಪಿನಲ್ಲಿ ತಿಳಿಸಲಾದ ದಂಡದ ಒಟ್ಟು 20.7ಲಕ್ಷ ರೂ. ಮೊತ್ತದಲ್ಲಿ ಹತ್ಯೆಗೊಳಗಾದ ಇಬ್ಬರು ಯುವಕರ ಕುಟುಂಬಕ್ಕೆ ಸಮಪಾಲಾಗಿ ವಿತರಿಸುವಂತೆ ನ್ಯಾಯಾಲಯ ಆದೇಶಿಸಿದೆ. ಜೀವಾವಧಿ ಶಿಕ್ಷೆಗೊಳಗಾದವರಿಗೆ ತಲಾ 2ಲಕ್ಷ ಹಾಗೂ ಐದುವರ್ಷ ಜೈಲು ಶಿಕ್ಷೆಗೊಳಗಾದವರಿಗೆ ತಲಾ 10ಸಾವಿರ ರೂ. ದಂಡ ವಿಧಿಸಲಾಗಿದೆ.
2019 ಫೆಬ್ರವರಿ 17 ರಂದು ರಾತ್ರಿ ಬೈಕಲ್ಲಿ ಸಂಚರಿಸುತ್ತಿದ್ದ ಯೂತ್ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ ಹಾಗೂ ಶರತ್ ಲಾಲ್ ಎಂಬವರನ್ನು ತಂಡ ಬರ್ಬರವಾಗಿ ಕೊಲೆ ನಡೆಸಿತ್ತು.