ಕಾಸರಗೋಡು: ಎಡಪಂಥೀಯ ಸÀರ್ಕಾರಿ ನೌಕರರು ಹಾಗೂ ಶಿಕ್ಷಕರಲ್ಲಿ ತೋರುವ ವಂಚನಾ ನೀತಿ ಕೊನೆಗೊಳಿಸುವಂತೆ ಡಿಸಿಸಿ ಪ್ರಧಾನ ಕಾರ್ಯದರ್ಶಿ ಪಿ. ವಿ ಸುರೇಶ್ ತಿಳಿಸಿದ್ದರೆ.
ಅವರು ಸರ್ಕಾರಿ ನೌಕರರ ಹಕ್ಕು ಕಸಿದುಕೊಳ್ಳುವ ಎಡಪಂಥೀಯ ಸರ್ಕಾರದ ನೀತಿ ವಿರುದ್ಧ ಪ್ರತಿಭಟಿಸಲು ಜನವರಿ 22 ರಂದು 'ಸೆಟೊ' ಕಾಸರಗೋಡು ತಾಲೂಕು ಸಮಿತಿ ವತಿಯಿಂದ ನಡೆಯುತ್ತಿರುವ ಮುಷ್ಕರದ ಪೂರ್ವಭಾವಿಯಾಗಿ ಸಂಜೆ ಧರಣಿಯನು ಉದ್ಘಾಟಿಸಿ ಮಾತನಡಿದರು.
ತೀವ್ರ ಹಣದುಬ್ಬರದ ನಡುವೆಯೂ ಉದ್ಯೋಗಿಗಳಿಗೆ ಸಕಾಲಕ್ಕೆ ತುಟ್ಟಿಭತ್ಯೆ ಸೇರಿದಂತೆ ಸವಲತ್ತು ನೀಡಲು ಮುಂದಾಗದ ಎಡರಂಗ ಸರ್ಕಾರ, ಶಿಕ್ಷಕರು ಸೇರಿದಮತೆ ಸರ್ಕಾರಿ ಸಿಬ್ಬಂದಿಗೆ ನಿರಮತರ ಕಿರುಕುಳ ನೀಡುತ್ತಿರುವುದು ಖಂಡನೀಯ. ನೌಕರರಲ್ಲಿ ತೋರುವ ಇಂತಹ ಋಣಾತ್ಮಕ ಧೋರಣೆಯನ್ನು ಸರಿಪಡಿಸಲು ಸರ್ಕಾರ ಸಿದ್ಧವಾಗಬೇಕು ಎಂದು ತಿಳಿಸಿದರು.
ಸೆಟೊ ಸಂಘಟನೆ ಮುಖಂಡರಾದ ಜಿ. ಕೆ.ಗಿರೀಶ್, ಕೆ.ಎಂ.ಜಯಪ್ರಕಾಶ್, ಪಿ.ಟಿ. ಬೆನ್ನಿ, ಕೊಳತ್ತೂರ್ ನಾರಾಯಣನ್, ಡಾ.ಕೆ.ವಿ.ಪ್ರಮೋದ್, ಎಂ. ಶ್ರೀನಿವಾಸನ್, ಪಿ.ಟಿ.ಜಯಪ್ರಕಾಶ್ ಮತ್ತು ವಿ.ಎಂ.ರಾಜೇಶ್ ಮೊದಲದವರು ಉಪಸ್ಥಿತರಿದ್ದರು.