ಕಾಸರಗೋಡು: ಸ್ಟೇಜ್ ಆರ್ಟಿಸ್ಟ್ ಆಂಡ್ ವರ್ಕರ್ಸ್ ಅಸೋಸಿಯೇಶನ್(ಸವಾಕ್)ನ ಕಾಸರಗೋಡು ಜಿಲ್ಲಾ ಸಮ್ಮೇಳನ ಇಂದು ಕಾಸರಗೋಡು ಅಡ್ಕತ್ತಬೈಲಿನ ಉಡುಪಿ ಗಾರ್ಡನ್ ನಲ್ಲಿ ಆಯೋಜಿಸಲಾಗಿದೆ.
ಬೆಳಿಗ್ಗೆ 9 ರಿಂದ ರಿಜಿಸ್ಟ್ರೇಶನ್,9.30ಕ್ಕೆ ಧ್ವಜಾರೋಹಣ ನಡೆಯಲಿದೆ. ಬಳಿಕ ನಡೆಯುವ ಸಭೆಯನ್ನು ಸವಾಕ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸುದರ್ಶನ ವರ್ಣ ಉದ್ಘಾಟಿಸುವರು. ಸವಾಕ್ ಜಿಲ್ಲಾಧ್ಯಕ್ಷ ಎಂ.ಉಮೇಶ ಸಾಲ್ಯಾನ್ ಕಾಸರಗೋಡು ಅಧ್ಯಕ್ಷತೆ ವಹಿಸುವರು. ರಾಜ್ಯ ಸಂಘಟನಾ ಕಾರ್ಯದರ್ಶಿ ವಿನೋದ್ ಅಜುಂಬಿತಾ ವರದಿ ಮಂಡಿಸುವರು. ಕೇರಳ ಸಂಗೀತ ನಾಟಕ ಅಕಾಡೆಮಿ ಸದಸ್ಯ ಉದಯನ್ ಕುಂಡಂಗುಳಿ, ನಗರಸಭಾ ಕೌನ್ಸಿಲರ್ ವರಪ್ರಸಾದ್ ಕೋಟೆಕಣಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಸವಾಕ್ ರಾಜ್ಯ ಉಪಾಧ್ಯಕ್ಷ ಝುಬೈರ್ ಕೋಝಿಕ್ಕೋಡ್ ಹಾಗೂ ರಾಜ್ಯ ಕಾರ್ಯದರ್ಶಿ ವಕೀಲ ವಿಜಯನ್ ವಿಶೇಷ ಅಥಿತಿಗಳಾಗಿ ಉಪಸ್ಥಿತರಿರುವರು. ಜಿಲ್ಲಾ ಕಾರ್ಯದರ್ಶಿ ಎಂ.ಎಂ.ಗಂಗಾಧರನ್ ಚಟುವಟಿಕೆ ವರದಿ ಮಂಡಿಸುವರು. ಜಿಲ್ಲಾ ಉಪಾಧ್ಯಕ್ಷ ದಿವಾಕರ ಪಿ., ಕೋಶಾಧಿಕಾರಿ ಚಂದ್ರಹಾಸ ಕೈಯ್ಯಾರು ಮೊದಲಾದವರು ನೇತೃತ್ವ ವಹಿಸುವರು.