ತ್ರಿಶೂರ್: ಕ್ಯಾಲಿಕಟ್ ವಿಶ್ವವಿದ್ಯಾಲಯದ ಡಿ-ವಲಯ ಕಲೋತ್ಸವದ ಸಂದರ್ಭದಲ್ಲಿ ನಡೆದ ಘರ್ಷಣೆ ನಂತರ, ತ್ರಿಶೂರ್‍ನ ವಿವಿಧ ಕಾಲೇಜುಗಳಳಿಗೂ ವ್ಯಾಪಿಸಿ ಸಂಘರ್ಷ ಭುಗಿಲೆದ್ದಿವೆ. ಘರ್ಷಣೆ ಎಸ್‍ಎಫ್‍ಐ ಮತ್ತು ಕೆಎಸ್‍ಯು ಕಾರ್ಯಕರ್ತರ ನಡುವೆ ನಡೆದಿದೆ.
ಎಸ್‍ಎಫ್‍ಐ ಪ್ರತಿಭಟನೆಯ ನಂತರ ಇರಿಂಞಲಕುಡದ ಕ್ರೈಸ್ಟ್ ಕಾಲೇಜು ಮತ್ತು ಎಂಟಿಐ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ನಡುವೆ ಘರ್ಷಣೆ ಸಂಭವಿಸಿದೆ. ಕ್ರೈಸ್ಟ್ ಕಾಲೇಜಿನ ಕೆಎಸ್‍ಯು ಘಟಕದ ಕಾರ್ಯದರ್ಶಿ ಆರನ್ ಮತ್ತು ಎಂಟಿಐ ಪಾಲಿಟೆಕ್ನಿಕ್‍ನ ಮೂರನೇ ವರ್ಷದ ವಿದ್ಯಾರ್ಥಿ ಅಶ್ವಿನ್ ಗಾಯಗೊಂಡಿದ್ದಾರೆ.
ಅಲೋಶಿಯಸ್ ಕಾಲೇಜು ಮತ್ತು ನಾಟಿಕಾ ಎಸ್ಎನ್ ಕಾಲೇಜಿನಲ್ಲಿ ಎಸ್‍ಎಫ್‍ಐ ಕಾರ್ಯಕರ್ತರು ಕೆಎಸ್‍ಯು ಧ್ವಜಸ್ತಂಭಗಳನ್ನು ನಾಶಪಡಿಸಿದರು. ಮೊನ್ನೆ ನಡೆದ ಹಿಂಸಾಚಾರದಲ್ಲಿ ಎರಡೂ ಗುಂಪುಗಳ ಹಲವಾರು ವಿದ್ಯಾರ್ಥಿಗಳು ಗಾಯಗೊಂಡಿರುವÀರು.