ವಾಷಿಂಗ್ಟನ್: ಇಲ್ಲಿನ ವಿದೇಶಾಂಗ ಮಾಜಿ ಕಾರ್ಯದರ್ಶಿ ಹಿಲರಿ ಕ್ಲಿಂಟನ್, ಫ್ಯಾಷನ್ ಡಿಸೈನರ್ ರಾಲ್ಫ್ ಲೌರೆನ್, ಫುಟ್‌ಬಾಲ್ ಆಟಗಾರ ಲಿಯೋನಲ್ ಮೆಸ್ಸಿ, ರಕ್ಷಣಾ ಇಲಾಖೆ ಮಾಜಿ ಕಾರ್ಯದರ್ಶಿ ಆಸ್ಟನ್ ಕಾರ್ಟರ್, ವಿವಾದಸ್ಪದ ಹೂಡಿಕೆದಾರ ಜಾರ್ಜ್ ಸೊರೊಸ್ ಹಾಗೂ 14 ಮಂದಿಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಪ್ರತಿಷ್ಠಿತ 'ಪ್ರೆಸೆಡೆನ್ಷಿಯಲ್ ಮೆಡಲ್ ಆಫ್ ಫ್ರೀಡಂ' ಪ್ರಶಸ್ತಿ ಘೋಷಿಸಿದರು.
ಅಮೆರಿಕದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದ್ದು, ಶ್ವೇತಭವನದಲ್ಲಿ ಶನಿವಾರ ಮಧ್ಯಾಹ್ನ ನಡೆದ ಕಾರ್ಯಕ್ರಮದಲ್ಲಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಅಮೆರಿಕದ ಪ್ರಗತಿ ಹಾಗೂ ಭದ್ರತೆಗಾಗಿ ಅಸಾಧಾರಣ ಕೊಡುಗೆ ನೀಡಿದ ವ್ಯಕ್ತಿಗಳು ಹಾಗೂ ವಿಶ್ವಶಾಂತಿ, ಸಾಮಾಜಿಕ ಕೊಡುಗೆ ನೀಡಿದ ಸಾರ್ವಜನಿಕ ಹಾಗೂ ಖಾಸಗಿ ಸಂಸ್ಥೆಗಳನ್ನು ಗುರುತಿಸಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಶ್ವೇತಭವನದ ಅಧಿಕಾರಿಗಳು ತಿಳಿಸಿದ್ದಾರೆ.
'ಆಯ್ಕೆಯಾದ ಎಲ್ಲರೂ ಅತ್ಯುತ್ತಮ ನಾಯಕರಾಗಿದ್ದು, ಅಮೆರಿಕ ಹಾಗೂ ವಿಶ್ವವನ್ನು ಉನ್ನತ ಮಟ್ಟಕ್ಕೆ ಏರಿಸುವಲ್ಲಿ ನಿರಂತವಾಗಿ ಶ್ರಮಿಸಿದ್ದು, ಅಸಾಧಾರಣ ಕೊಡುಗೆ ನೀಡಿದ್ದಾರೆ' ಎಂದು ಅಧ್ಯಕ್ಷ ಜೋ ಬೈಡನ್ ಅಭಿಪ್ರಾಯಪಟ್ಟಿದ್ದಾರೆ.
ಲಿಯೋನಲ್ ಮೆಸ್ಸಿ-ಎಎಫ್‌ಪಿ ಚಿತ್ರ