ಮುಳ್ಳೇರಿಯ: ಆದೂರು ಶ್ರೀ ಭಗವತೀ ದೇವಸ್ಥಾನದ ಪೆರುಂಕಳಿಯಾಟ ಮಹೋತ್ಸವದ ಅಂಗವಾಗಿ ಭತ್ತ ಅಳೆಯುವ(ಕೂವಂ ಅಳಕ್ಕಲ್) ಸಮಾರಂಭ ಅಡೂರು ಶ್ರೀ ಭಗವತಿ ದೇವಸ್ಥಾನದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿತು.
ದೇವಸ್ಥಾನ ಕ್ಷೇತ್ರ ಸ್ಥಾನಿಕರು ಸಮಾರಂಭದ ಪೌರೋಹಿತ್ಯ ವಹಿಸಿದ್ದರು. ಆಚರಣಾ ಸಮಿತಿ ನೇತೃತ್ವದಲ್ಲಿ ಶೇ. ನೂರು ಸಾವಯವ ಪದ್ಧತಿಯಲ್ಲಿ ಬೆಳೆದ ಭತ್ತವನ್ನು ಬಳಸಿ ಭತ್ತ ಅಳೆಯುವ ಸಂಪ್ರದಾಯ ನಡೆಸಲಾಯಿತು.
ಪೆರುಂಕಳಿಯಾಟ ಮಹೋತ್ಸವದ ಅಂಗವಾಗಿ ಗೊನೆ ಕಡಿಯುವ ಮುಹೂರ್ತ ಹಾಗೂ ಇತರ ಕ್ರಿಯಾದಿಗಳು ಜ. 12ರಂದು ಜರುಗಲಿದೆ.
ಮೂರೂವರೆ ದಶಕಗಳ ನಂತರ ಜ.19ರಿಂದ 24ರ ವರೆಗೆ ದೇಗುಲದ ಮುಂಭಾಗದಲ್ಲಿ ಪೆರುಂಕಳಿಯಾಟ ಮಹೋತ್ಸವ ವಿವಿಧ ಧಾರ್ಮಿಕ ಕಲಾ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಅದ್ಧೂರಿಯಾಗಿ ಆಚರಿಸಲು ಆಚರಣಾ ಸಮಿತಿ ಸಜ್ಜಾಗಿದೆ.