ಕೊಚ್ಚಿ: ಆದಾಯ ತೆರಿಗೆ ಇಲಾಖೆಯಿಂದ ರಾಜ್ಯದ ಅಲ್ ಮುಕ್ತದಿರ್ ಜ್ಯುವೆಲ್ಲರಿ ಶಾಖೆಗಳ ತಪಾಸಣೆ ನಡೆಸಲಾಗಿದೆ. ಶೂನ್ಯ ಪರ್ಸೆಂಟ್ ವೇತನ ನೀಡುವ ಮೂಲಕ ಭಾರೀ ಹೂಡಿಕೆ ವಂಚನೆ ಆರೋಪದ ನಂತರ ಆದಾಯ ತೆರಿಗೆ ಇಲಾಖೆ ಅಲ್ ಮುಕ್ತದಿರ್ ಗ್ರೂಪ್‍ನ ಆಭರಣ ಶೋರೂಂಗಳ ಮೇಲೆ ದಾಳಿ ನಡೆಸಿದೆ.
ಗ್ರಾಹಕರಿಂದ ಮುಂಗಡ ಹಣ ಪಡೆದಿರುವ ಚಿನ್ನದ ವಹಿವಾಟಿನ ಮೇಲೆ ತನಿಖೆ ನಡೆದಿದೆ. ಕಳೆದ ವಷರ್À ಫೆಬ್ರವರಿಯಲ್ಲಿಯೂ ಆದಾಯ ತೆರಿಗೆ ಇಲಾಖೆ ಕೇರಳದ ಅಲ್ ಮುಕ್ತದಿರ್ ಜ್ಯುವೆಲ್ಲರಿ ಗ್ರೂಪ್‍ನ ವಿವಿಧ ಶೋರೂಂಗಳ ಮೇಲೆ ದಾಳಿ ನಡೆಸಿತ್ತು. ಆದಾಯ ತೆರಿಗೆ ಇಲಾಖೆಯ ಟಿಡಿಎಸ್ ವಿಭಾಗದ ನೇತೃತ್ವದಲ್ಲಿ ದಾಳಿ ನಡೆದಿದೆ. ಅಂದು ನಡೆದ ದಾಳಿಯಲ್ಲಿ ಭಾರೀ ಪ್ರಮಾಣದ ತೆರಿಗೆ ವಂಚನೆ ಮತ್ತು ಕಪ್ಪುಹಣ ಹೂಡಿಕೆಯ ಕುರಿತು ಪ್ರಮುಖವಾಗಿ ತನಿಖೆ ನಡೆಸಲಾಗಿತ್ತು.
ಕಳೆದ ಕೆಲವು ದಿನಗಳಿಂದ, ಆಭರಣ ಉದ್ಯಮವು ದೊಡ್ಡ ಆರ್ಥಿಕ ಬಿಕ್ಕಟ್ಟಿನಲ್ಲಿದೆ ಎಂಬ ವರದಿಗಳು ಬಂದಿವೆ. ಆದರೆ ಇದನ್ನು ಅಲ್ಲಗಳೆದ ಜ್ಯುವೆಲರ್ ಮಾಲೀಕರು, ಈ ವರದಿಗಳು ಇತರ ಆಭರಣಗಳ ಸುಳ್ಳು ಪ್ರಚಾರ ಎಂದು ಆರೋಪಿಸಿದ್ದಾರೆ. ಅಲ್ಮುಕ್ತದಿರ್ ಗ್ರೂಪ್ ವಿರುದ್ಧ ವ್ಯಾಪಕ ದೂರುಗಳು ಬಂದಿದ್ದು, ಅವರು ಮುಸ್ಲಿಂ ಸಮುದಾಯದ ಒಂದು ವರ್ಗಕ್ಕೆ 0% ಕಮಿಷನ್‍ನಲ್ಲಿ ಚಿನ್ನಾಭರಣ ನೀಡುವುದಾಗಿ ಭರವಸೆ ನೀಡಿ ವಂಚಿಸಿದ್ದಾರೆ.