ಕೊಟ್ಟಾಯಂ: ಶಿವಗಿರಿ ಮಠ ಮತ್ತು ಎಸ್‍ಎನ್‍ಡಿಪಿ ಯೋಗದ ದೇವಸ್ಥಾನಗಳಲ್ಲಿ ಪುರುಷರು ಅಂಗಿ ಧರಿಸಿ ಪ್ರವೇಶ ನೀಡುವಂತೆ ಮಠದ ಮುಖ್ಯಸ್ಥ ಸ್ವಾಮಿ ಸಚ್ಚಿದಾನಂದ ಸಲಹೆ ನೀಡಿದ ಬೆನ್ನಲ್ಲೇ ಇನ್ನಷ್ಟ್ಟು ದೇವಸ್ಥಾನಗಳು ಆ ನಿಟ್ಟಿನಲ್ಲಿ ಸಾಗಲು ಆರಂಭಿಸಿವೆ.
ಶ್ರೀ ನಾರಾಯಣಗುರುವನ್ನು ಪ್ರತಿμÁ್ಠಪಿಸಿದ ದೇವಾಲಯಗಳಲ್ಲಿ, ಅಂಗಿ ಧರಿಸಿದ ಪುರುಷರು ದರ್ಶನಕ್ಕೆ ಅನುಮತಿ ನೀಡಲು ಪ್ರಾರಂಭಿಸಲಾಯಿತು. ಕುಮಾರಕಂ ಶ್ರೀ ಕುಮಾರಮಂಗಲಂ ದೇವಸ್ಥಾನಕ್ಕೆ ಪುರುಷರು ಶರ್ಟ್ ಧರಿಸಿ ಪ್ರವೇಶಿಸಬಹುದು ಎಂದು ದೇವಸ್ವಂ ಅಧ್ಯಕ್ಷ ಎ.ಕೆ.ಜಯಪ್ರಕಾಶ್ ಮತ್ತು ಕಾರ್ಯದರ್ಶಿ ಕೆ.ಪಿ.ಆನಂದ ಕುಟ್ಟನ್ ಘೋಷಿಸಿರುವರು. ಶಿವಗಿರಿ ಮಠದ ಅಧೀನದಲ್ಲಿರುವ ಶ್ರೀ ನಾರಾಯಣ ಗುರುಗಳ ಸಮರ್ಪಣಾ ಸಮಾರಂಭದಲ್ಲಿ ಭಾನುವಾರ ನಡೆದ ಶ್ರೀ ಕುಮಾರಮಂಗಲ ದೇವಸ್ಥಾನದ ಮಹಾಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
112 ವರ್ಷಗಳಷ್ಟು ಹಳೆಯದಾದ ಈ ದೇವಾಲಯದಲ್ಲಿ ಚೆರಾಯಿ ಗೌರೀಶ್ವರ ದೇವಸ್ಥಾನಕ್ಕೂ ಪ್ರವೇಶದ ಬಗ್ಗೆ ಚರ್ಚೆ ನಡೆದಿತ್ತು.