ತಿರುವನಂತಪುರಂ: ಕೇರಳದ ನೂತನ ರಾಜ್ಯಪಾಲರಾಗಿ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಇಂದು ಪ್ರಮಾಣ ವಚನ ಸ್ವೀಕರಿಸಿದರು. ರಾಜಭವನದಲ್ಲಿ ಬೆಳಗ್ಗೆ 10.30ಕ್ಕೆ ನಡೆದ ಸಮಾರಂಭದಲ್ಲಿ ಮುಖ್ಯ ನ್ಯಾಯಮೂರ್ತಿ ನಿತಿನ್ ಮಧುಕರ್ ಜಾಮ್ದಾರ್ ಪ್ರಮಾಣ ವಚನ ಬೋಧಿಸಿದರು.
ಸಮಾರಂಭದಲ್ಲಿ ಮುಖ್ಯಮಂತ್ರಿ, ಸ್ಪೀಕರ್, ವಿರೋಧ ಪಕ್ಷದ ನಾಯಕರು ಹಾಗೂ ಇತರೆ ಸಚಿವರು ಭಾಗವಹಿಸಿದ್ದರು.
ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ತಮ್ಮ ಪತ್ನಿ ಅನಘಾ ಅರ್ಲೇಕರ್ ಅವರೊಂದಿಗೆ ಸಮಾರಂಭದಲ್ಲಿ ಭಾಗವಹಿಸಿದ್ದರು. ನಿನ್ನೆ ಸಂಜೆ ತಿರುವನಂತಪುರಂ ವಿಮಾನ ನಿಲ್ದಾಣದ ತಾಂತ್ರಿಕ ಪ್ರದೇಶಕ್ಕೆ ಆಗಮಿಸಿದ ರಾಜ್ಯಪಾಲರನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಸಚಿವರು ಬರಮಾಡಿಕೊಂಡಿದ್ದÀರು.
ಸುದೀರ್ಘ ಕಾಲ ಆರ್‍ಎಸ್‍ಎಸ್‍ನಲ್ಲಿ ಸೇವೆ ಸಲ್ಲಿಸಿದ ರಾಜೇಂದ್ರ ಅರ್ಲೇಕರ್ 1989ರಲ್ಲಿ ಬಿಜೆಪಿ ಸೇರಿದರು. ಗೋವಾದಲ್ಲಿ ಸ್ಪೀಕರ್ ಮತ್ತು ಸಚಿವರಾಗಿ ಕಾರ್ಯನಿರ್ವಹಿಸಿದ್ದ ರಾಜೇಂದ್ರ ಅರ್ಲೇಕರ್ ಅವರು ಸ್ಪೀಕರ್ ಆಗಿದ್ದಾಗ ದೇಶದ ಮೊದಲ ಕಾಗದ ರಹಿತ ವಿಧಾನಸಭೆ ಎನಿಸಿಕೊಂಡಿತ್ತು.