ಭೋಪಾಲ್: ಇಲ್ಲಿನ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಧ್ಯಪ್ರದೇಶದ ಈ ಕಾರಾಗೃಹದಲ್ಲಿ 70ಕ್ಕೂ ಹೆಚ್ಚು ಉಗ್ರರಿದ್ದಾರೆ. ಆಗಾಗಿ ಇಲ್ಲಿ ಭಾರೀ ಭದ್ರತೆ ಕಲ್ಪಿಸಲಾಗಿದೆ. ಗಸ್ತು ಸಿಬ್ಬಂದಿಯೊಬ್ಬರು ಕಾರಾಗೃಹದ ಹೊರಗೆ ನೆಲದ ಮೇಲೆ ಬಿದ್ದಿದ್ದ ಡ್ರೋನ್ ಪತ್ತೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಚೀನಾ ನಿರ್ಮಿತ ಈ ಡ್ರೋನ್ ಎರಡು ಲೆನ್ಸ್ಗಳನ್ನು ಒಳಗೊಂಡಿದೆ. ಈ ಸಂಬಂಧ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿ ಗ್ಯಾಂಗ್ಸ್ಟರ್ ಮತ್ತು ಭಯೋತ್ಪಾದಕರಿಗಾಗಿ ಪ್ರತ್ಯೇಕ ಸೆಲ್ (ಕೋಣೆ) ಅನ್ನು ತೆರೆಯಲಾಗಿದೆ. ಇದನ್ನು
ಆಯಂಡಾ ಸೆಲ್ ಎಂದೂ ಕರೆಯುತ್ತಾರೆ. ಇಲ್ಲಿ ಭಾರೀ ಭದ್ರತೆ ಇರಲಿದೆ ಎಂದು ಅವರು ಹೇಳಿದ್ದಾರೆ.