ಮಂಜೇಶ್ವರ: ಮಂಜೇಶ್ವರ ಹೊಸಬೆಟ್ಟು ಸಮುದ್ರ ತೀರದ ಅಳಿವೆ ಬಾಗಿಲಿನಲ್ಲಿ ವಷರ್ಂಪ್ರತಿ ಜರಗುವ ಉದ್ಯಾವರ ಶ್ರೀ ದೈವಗಳ ಭೇಟಿ ಮತ್ತು ಶ್ರೀ ಬೊಬ್ಬರ್ಯ ದೈವದ ಜಾತ್ರೆ ಹಾಗೂ ಶ್ರೀ ಭಗವತೀ ಮಾತೆಯ ಹೂಮುಡಿ ಮಹೋತ್ಸವ ಸೋಮವಾರ ಸಂಪನ್ನಗೊಂಡಿತು.
ಉದ್ಯಾವರ ಮಾಡ ಕ್ಷೇತ್ರದಿಂದ ಭಂಡಾರ ಆಗಮಿಸಿ, ಉದ್ಯಾವರ ದೈವಗಳ ಭೇಟಿಯೊಂದಿಗೆ ಶ್ರೀ ಬೊಬ್ಬರ್ಯ ದೈವದ ಜಾತ್ರೆ ಹಾಗೂ ಶ್ರೀ ಭಗವತೀ ಮಾತೆಯ ಹೂಮುಡಿ ಉತ್ಸವ ನೆರವೇರಿತು. ಸಹಸ್ರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು.