HEALTH TIPS

ಚಿಣ್ಣರ ಚಿಲುಮೆ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ

ಮಂಜೇಶ್ವರ: ಚಿಣ್ಣರ ಚಿಲುಮೆ ಸಂಘಟಕ ಸಮಿತಿ ಕಾಸರಗೋಡು ಇದರ ನೇತೃತ್ವದಲ್ಲಿ ಉಪಜಿಲ್ಲಾ, ಜಿಲ್ಲಾ ಹಾಗೂ ರಾಜ್ಯ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದ ಬಾಕುಡ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಅಭಿನಂದಿಸುವ ಕಾರ್ಯಕ್ರಮವು ಪ್ರೇರಣಾ ಸಭಾಂಗಣದಲ್ಲಿ ಇತ್ತೀಚೆಗೆ ಜರಗಿತು. 

18 ದೈವಸ್ಥಾನಗಳ ಒಕ್ಕೂಟದ ಸಮಿತಿಯ ಅಧ್ಯಕ್ಷ ಶಂಕರ ಅಡ್ಕ ಉದ್ಘಾಟಿಸಿದರು. ಚಿಣ್ಣರ ಚಿಲುಮೆ ಸಂಘಟಕ ಸಮಿತಿ ಅಧ್ಯಕ್ಷ ವಿಜಯ ಪಂಡಿತ್ ಮಂಗಲ್ಪಾಡಿ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಶ್ವಿನಿ ಎಂ.ಎಲ್. ಪಜ್ವ, ಕುಬಣೂರು ಎಸ್.ಆರ್.ಎ.ಎಲ್.ಪಿ  ಶಾಲೆಯ ಮುಖ್ಯೋಪಾಧ್ಯಾಯಿನಿ ಮೀರಾ ಟೀಚರ್, ದೈವದ ಪಾತ್ರಿಗಳಾದ ಗಣೇಶ್ ಮಂಗಳೂರು, ಸೂರ್ಯ ಕುಂಜತ್ತೂರು , ಪ್ರವೀಣ್ ಬೇಕೂರು,ನೇಮು, ವಿಶ್ವನಾಥ ಮಾಸ್ತರ್ ಕುಬಣೂರು, ಏಕಾನಂದ ಮಂಗಳೂರು, ಸೀತಾರಾಮ ಅಂಗಡಿಪದವು, ಚಂದ್ರ ಶೇಖರ ಅಂಗಡಿಪದವು, ಆನಂದ ಅಂಗಡಿಪದವು, ಪ್ರವೀಣ್ ಕೊಡೆಂಚಿರಿ, ಬೇಬಿ ತಾರಾನಾಥ್ ತಚ್ಚನಿ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಮುದಾಯದ ಸಾಧಕರಾದ ದೈವದ ಪಾತ್ರಿ ಕೃಷ್ಣ ಇಡಿಯ ,ಡಾಕ್ಟರೇಟ್ ಪದವಿ ಪಡೆದ ಅಮಿತಾ ಮಂಜೇಶ್ವರ,ಸೋಮೇಶ್ವರ ಪುರಸಭೆ ಅಧ್ಯಕ್ಷೆ ಕಮಲ ಮಾಡೂರು, ಹರೀಶ್ ಮಾಸ್ತರ್ ಅಂಗಡಿಪದವು, ಮನು ಮೋಹನ್ ಅತ್ತಾವರ, ಪ್ರಿಜ್ಜು ಬಲ್ಲಾರ್, ರಘು ರಾಮ್ ಛತ್ರ0ಪಳ್ಳ, ಮಂಜುನಾಥ್ ಪ್ರತಾಪ್ ನಗರ, ಮುರುಗೇಶ್ ಪಚ್ಲಂಪಾರೆ , ವಿಶ್ವಾಸ್ ಮಂಗಲ್ಪಾಡಿ,ಅಕ್ಷ್ಮೀತಾ ಬೆಜ್ಜ,ನೇಹಾ ಅಂಗಡಿಪದವು ,ಮೊದಲಾದವರನ್ನು ಸನ್ಮಾನಿಸಲಾಯಿತು. ಸುರೇಶ್ ಮಂಗಲ್ಪಾಡಿ ರಚಿಸಿ ರಾಗ ಸಂಯೋಜನೆ ಮಾಡಿದ ಗೀತೆಯನ್ನು ಪವನ್ ಹೊಸಂಗಡಿ ಇವರ ನೇತೃತ್ವದಲ್ಲಿ ಸಮೂಹ ಸ್ವಾಗತ ಗೀತೆಯಾಗಿ ಹಾಡಿ ಮನರಂಜಿಸಿದರು. ಬಾಕುಡ ಸಮುದಾಯದ ಕೇಂದ್ರ ಸಮಿತಿಯ ಕಾರ್ಯದರ್ಶಿ ತುಳಸಿದಾಸ್ ಮಂಜೇಶ್ವರ ಸ್ವಾಗತಿಸಿ, ಚಿಣ್ಣರ ಚಿಲುಮೆ ಸಂಘಟಕ ಸಮಿತಿಯ ಜೊತೆ ಕಾರ್ಯದರ್ಶಿ ನಿರಂಜನ್ ಮಾಸ್ತರ್ ಕುಂಜತ್ತೂರು ವಂದಿಸಿದರು. ಸುರೇಶ್ ಮಂಗಲ್ಪಾಡಿ ಹಾಗೂ ಜಯಪ್ರಕಾಶ್ ಮಂಜೇಶ್ವರ ಕಾರ್ಯಕ್ರಮ ನಿರೂಪಿಸಿದರು. 


ಬಳಿಕ ಚಿಣ್ಣರ ಚಿಲುಮೆ ಸಂಘಟಕ ಸಮಿತಿಯ ಉಪಾಧ್ಯಕ್ಷ ರಾಜೇಶ್ ಮಾಸ್ತರ್ ಮಂಜೇಶ್ವರ ರವರ ಅಧ್ಯಕ್ಷತೆಯಲ್ಲಿ ಸಾಮಾಜಿಕ ಧಾರ್ಮಿಕ ಮುಂದಾಳು ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರು ಇವರಿಂದ ಆಚಾರ-ವಿಚಾರ ಮತ್ತು ವಿಧ್ಯಾಭ್ಯಾಸ ಎಂಬ ವಿಷಯದ ಕುರಿತು ಮಾಹಿತಿ ತರಗತಿ ನಡೆಯಿತು. ಸುರೇಶ್ ಶೆಟ್ಟಿ ಪರಂಕಿಲ, ಚಂದ್ರಕಾಂತ್ ಇಚ್ಲಂಗೋಡು ಮೊದಲಾದವರು ಉಪಸ್ಥಿತರಿದ್ದರು.ಚಿಣ್ಣರ ಚಿಲುಮೆ ಸಂಘಟಕ ಸಮಿತಿಯ ಕಾರ್ಯದರ್ಶಿ ರಾಜೇಶ್ ಕೊಡ್ಲಮೊಗರು ಸ್ವಾಗತಿಸಿ, ಉಮಾನಾಥ ಕಾವೂರು ವಂದಿಸಿದರು. ಊಟದ ವಿರಾಮದ ಬಳಿಕ ಸಮುದಾಯದ ಪ್ರತಿಭೆಗಳಿಂದ ಮಂಜುನಾಥ್ ಕೊಡ್ಲಮೊಗರು ಇವರ ನೇತೃತ್ವದಲ್ಲಿ ಸಂಗೀತ ರಸಮಂಜರಿ ಕಾರ್ಯಕ್ರಮ ಜರಗಿತು. ಅಂಗಡಿಪದವು ನಿತ್ಯಾನಂದ ಕುಣಿತ ತಂಡದಿ0ದ  ಜೈ ಹನುಮಾನ್ ನೃತ್ಯ ರೂಪಕ ಜರಗಿತು.

ಸಮಾರೋಪ ಸಮಾರಂಭದಲ್ಲಿ ಬಾಕುಡ ಸಮುದಾಯದ ಕೇಂದ್ರ ಸಮಿತಿ ಉಪಾಧ್ಯಕ್ಷ ವಿಠಲ್ ನಾರಾಯಣ ಬ0ಬ್ರಾಣ ಇವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಉಪಜಿಲ್ಲಾ, ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಹರೀಶ್ ಶೆಟ್ಟಿ ಮಾಡ,ಯಾದವ ಬಡಾಜೆ, ಇಂದಿರಾ ನಾಗೇಶ್ ಮಂಗಳೂರು, ನವೀನ್ ಮಂಗಳೂರು,ಜಯಕುಮಾರ್ ಗುರೂಜಿ ಕಡ0ಬಾರ್,ಉದಯ್ ಕುಮಾರ್ ಬೆಧ್ರಡ್ಕ,ಸತೀಶ್ ಮಂಗಲ್ಪಾಡಿ,ಪವನ್ ಮಜಲ್,ಅಧ್ಯಕ್ಷರಾದ ವಿಜಯ್ ಪಂಡಿತ್ ಮಂಗಲ್ಪಾಡಿ,ಸುಮಂಗಳ ಪೆÇೀಸೊಟ್, ಬೇಬಿ ತಾರಾನಾಥ್ ತಚ್ಚನಿ ಮೊದಲಾದವರು ಉಪಸ್ಥಿತರಿದ್ದರು.ಸಂಧ್ಯಾ ಭರತ್ ಅಟ್ಟೆಗೋಳಿ,ಸೌಮ್ಯ ಉದ್ಯಾವರ ,ಸೌಮ್ಯ ಕಡಂಬಾರ್,ಸುಮಿತ್ರಾ ಬ0ಬ್ರಾಣ,ಚಿತ್ರಾಕ್ಷಿ ಕತ್ತೆರಿಕೋಡಿ ,ಶಶಿಕಲಾ ಅಂಗಡಿಪದವು , ಅಮಿತಾ ಸೋಂಕಾಲ್ ,ನಾಗಿನಿ ಪವನ್, ವಿಶ್ಮಿತಾ ಭಗವತಿ, ಶಿಲ್ಪಾ ಮಂಗಳೂರು,ಪ್ರೀತಿ ಭಗವತಿ,ಸವಿತಾ ಮಂಗಲ್ಪಾಡಿ,ಸುಕನ್ಯಾ ಭಗವತಿ, ವೀಣಾ ತೂಮಿನಾಡು,ಗೌತಮಿ ಕಾಜೂರು ಮೊದಲಾದವರು ಸನ್ಮಾನಿತರ ಪರಿಚಯ ವಾಚಿಸಿದರು.ಚಿಣ್ಣರ ಚಿಲುಮೆ ಸಂಘಟಕ ಸಮಿತಿಯ ನಿರ್ದೇಶಕ ಅಶೋಕ್ ಕೊಡ್ಲಮೊಗರು ಪ್ರಾಸ್ತಾವಿಕ ಮಾತುಗಳನ್ನಾಡಿದರು.ಚಿಣ್ಣರ ಚಿಲುಮೆ ಸಂಘಟಕ ಸಮಿತಿಯ ಸಾಂಸ್ಕøತಿಕ ಕಾರ್ಯದರ್ಶಿ ಪವನ್ ಹೊಸಂಗಡಿ ಸ್ವಾಗತಿಸಿ ರಘು ರಾಮ್ ಛತ್ರ0ಪಳ್ಳ ವಂದಿಸಿದರು.ಹರೀಶ್ ಮಾಸ್ತರ್ ಅಂಗಡಿಪದವು ಮತ್ತು ಶರತ್ ಬೇಕೂರು ಕಾರ್ಯಕ್ರಮ ನಿರೂಪಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries