ಅಹಮದಾಬಾದ್: ರಾಜ್‌ಕೋಟ್ ಮೂಲದ ಟಿಆರ್‌ಪಿ ಮಾಲ್ ಗೇಮ್ ಜೋನ್ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ ಗುರುವಾರ ಜಾಮೀನು ಮಂಜೂರು ಮಾಡಿರುವ ಗುಜರಾತ್ ಹೈಕೋರ್ಟ್, ಐವರು ಆರೋಪಿಗಳ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.
ನ್ಯಾಯಮೂರ್ತಿ ಎಂ.ಆರ್.ಮೆಂಗ್ಡೆ ಅವರ ನೇತೃತ್ವದ ಪೀಠವು, ಸಹಾಯಕ ನಗರ ಯೋಜನಾ ಅಧಿಕಾರಿಗಳಾದ ರಾಜೇಶ್ ಮಕ್ವಾನಾ, ಗೌತಮ್ ಜೋಷಿ, ಸಹಾಯಕ ಎಂಜಿನಿಯರ್ ಜಯದೀಪ್ ಚೌಧರಿ ಅವರಿಗೆ ಜಾಮೀನು ಮಂಜೂರು ಮಾಡಿತು.
ಆದರೆ, ಮುಖ್ಯ ಅಗ್ನಿಶಾಮಕ ಅಧಿಕಾರಿ ಇಲೇಶ್ ಖೇರ್, ಜಮೀನಿನ ಮಾಲೀಕ ಮತ್ತು ಗೇಮ್ ಜೋನ್‌ನ ಪಾಲುದಾರ ಅಶೋಕ್ ಜಡೇಜಾ, ಮತ್ತೊಬ್ಬ ಪಾಲುದಾರ ಕಿರಿತ್ ಜಡೇಜಾ, ನಗರ ಯೋಜನಾ ಅಧಿಕಾರಿ ಮನ್ಸುಖ್ ಸಾಗತಿಯಾ ಅವರಿಗೆ ಪೀಠವು ಜಾಮೀನು ನಿರಾಕರಿಸಿತು.
ಕಳೆದ ವರ್ಷದ ಮೇ 25ರಂದು ರಾಜ್‌ಕೋಟ್‌ನ ಟಿಆರ್‌ಪಿ ಮಾಲ್‌ನ ಗೇಮಿಂಗ್ ಜೋನ್‌ನಲ್ಲಿ ಭಾರಿ ಅಗ್ನಿ ದುರಂತ ಸಂಭವಿಸಿ ಮಕ್ಕಳು ಸೇರಿದಂತೆ 27 ಮಂದಿ ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 15 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.