ನಮ್ಮ ಮುಖ ಬಿಳಿಯಾಗಿ ಹೊಳೆಯಬೇಕು. ಸುಂದರವಾಗಿ ಆಕರ್ಷಕವಾಗಿ ಕಾಣಿಸಬೇಕು ಎಂದು ನಾವೆಲ್ಲಾ ಬಯಸುತ್ತೇವೆ. ಹಾಗೆ ಮಹಿಳೆಯರು, ಯುವತಿಯರು ಈಗ ಪಾರ್ಲರ್‌ಗಾಗಿಯೆ ಸಾವಿರಾರು ರೂಪಾಯಿ ವ್ಯಯಿಸುವುದು ನಾವು ನೋಡಿದ್ದೇವೆ. ಹಾಗೆ ಮಾರುಕಟ್ಟೆಯಲ್ಲಿ ಸಿಗುವಂತಹ ದುಬಾರಿ ಬೆಲೆಯ ಕ್ರೀಮ್‌ಗಳ ಬಳಸಿಕೊಂಡು ಮುಖವನ್ನು ಸುಂದರವಾಗಿಸಲು ಅವರು ಪರದಾಡುತ್ತಾರೆ.
ಹಾಗೆ ಮುಖದ ಮೇಲಿನ ಕಲೆಗಳು, ಮೊಡವೆಗಳ ಹೋಗಲಾಡಿಸಲು ಹಲವು ರೀತಿಯ ಕ್ರೀಮ್‌ಗಳು, ಥೆರಪಿಗಳ ಮೊರೆ ಹೋಗುವುದು ನಾವು ನೋಡಿದ್ದೇವೆ. ಅವರಲ್ಲಿ ಮುಖದ ಕಾಂತಿ ಹೆಚ್ಚಿಸಲಿ ಹೆಚ್ಚು ಬಿಳಿಯಾಗಿ ಕಾಣಿಸಬೇಕು ಎಂಬ ಕಾರಣಕ್ಕೆ ಹಲವು ರೀತಿಯ ಕಸರತ್ತು ನಡೆಸುತ್ತಾರೆ. ಎಷ್ಟೇ ದುಬಾರಿ ಕ್ರೀಮ್‌ಗಳು, ಸೌಂದರ್ಯ ವರ್ಧಕವಿದ್ದರೂ ಕೂಡ ಅದನ್ನು ಒಮ್ಮೆಯಾದರು ಬಳಸಲು ಮುಂದಾಗುತ್ತಾರೆ.
ಹಾಗೆ ಮುಖದ ಮೇಲಿನ ಕಲೆಗಳು, ಮೊಡವೆಗಳ ಹೋಗಲಾಡಿಸಲು ಹಲವು ರೀತಿಯ ಕ್ರೀಮ್‌ಗಳು, ಥೆರಪಿಗಳ ಮೊರೆ ಹೋಗುವುದು ನಾವು ನೋಡಿದ್ದೇವೆ. ಅವರಲ್ಲಿ ಮುಖದ ಕಾಂತಿ ಹೆಚ್ಚಿಸಲಿ ಹೆಚ್ಚು ಬಿಳಿಯಾಗಿ ಕಾಣಿಸಬೇಕು ಎಂಬ ಕಾರಣಕ್ಕೆ ಹಲವು ರೀತಿಯ ಕಸರತ್ತು ನಡೆಸುತ್ತಾರೆ. ಎಷ್ಟೇ ದುಬಾರಿ ಕ್ರೀಮ್‌ಗಳು, ಸೌಂದರ್ಯ ವರ್ಧಕವಿದ್ದರೂ ಕೂಡ ಅದನ್ನು ಒಮ್ಮೆಯಾದರು ಬಳಸಲು ಮುಂದಾಗುತ್ತಾರೆ.
ಹಾಗೆ ಕೆಲವೊಮ್ಮೆ ನೀವು ಬಳಸುತ್ತಿರುವ ಕ್ರೀಮ್‌ಗಳು, ಸೌಂದರ್ಯ ವರ್ಧಕ ವಸ್ತಗಳೇ ನಿಮ್ಮ ಮುಖದ ಚರ್ಮಕ್ಕೆ ಹಾನಿ ಮಾಡುವುದು ಕೂಡ ನಾವು ನೋಡಿರಬಹುದು. ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ಕ್ರೀಮ್‌ಗಳು ಎಲ್ಲರ ಚರ್ಮಕ್ಕೂ ಹೊಂದಿಕೊಳ್ಳುವುದಿಲ್ಲ, ಪ್ರತಿಯೊಬ್ಬರ ಚರ್ಮದ ಲಕ್ಷಣಗಳು ಬೇರೆಯದ್ದೇ ಆಗಿರುತ್ತೆ. ಅದಕ್ಕೆ ಸರಿಹೊಂದುವಂತಹ ಕ್ರೀಮ್‌ಗಳ ಬಳಸುವುದೇ ಉತ್ತಮ ಅಭ್ಯಾಸ ಆಗಿರುತ್ತೆ. ಆದ್ರೆ ನಾವು ಬಳಸುವ ಕ್ರೀಮ್‌ಗಳು ನಮ್ಮ ಚರ್ಮಕ್ಕೆ ಹಾನಿ ಮಾಡುತ್ತಿದೆ ಎಂಬುದನ್ನು ನಾವು ತಿಳಿದುಕೊಳ್ಳುವುದಾದ್ರು ಹೇಗೆ? ಕೆಲವೊಮ್ಮೆ ನಾವು ಬಳಸುವ ಕ್ರೀಮ್‌ಗಳು ಅಲರ್ಜಿ, ರಾಷಸ್, ಕಚ್ಚಿ, ಕೆಂಪು ಕಲೆಗಳಿಗೆ ಕಾರಣವಾಗುತ್ತದೆ. ಹಾಗೆ ಮತ್ತೆ ಕೆಲವೊಂದು ಪ್ರಕರಣದಲ್ಲಿ ಮುಖದಲ್ಲಿ ಸುಟ್ಟ ಗಾಯದಂತ ಕಲೆಗಳು ಮೂಡುವುದು, ಕಪ್ಪು ಕಲೆ, ಚರ್ಮದ ಮೇಲ್ಭಾಗ ನಾಶವಾಗುವುದು ನೋಡಬಹುದು. ಹಾಗೆ ಕೆಲವೊಮ್ಮೆ ನಾವು ಆ ಕ್ರೀಮ್ ಬಳಸಿ ಬಿಸಿಲಿಗೆ ಹೋದಾಗ ವ್ಯತಿರಿಕ್ತ ಪರಿಣಾಮಕ್ಕೆ ಕಾರಣವಾಗುವುದನ್ನು ಕೂಡ ನಾವು ನೋಡಿದ್ದೇವೆ.
ಹಾಗಾದ್ರೆ ನಾವು ಬಳಸುವ ಸೌಂದರ್ಯ ವರ್ಧಕವು ನಮಗೆ ಹಾನಿ ಮಾಡುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ನಾವಿಂದು ಬ್ಯೂಟಿಷಿಯನ್ ಆಗಿರುವ ಶೋಭಾ ಎನ್ ಡಿ ಅವರು ಹೇಳಿರುವ ಕೆಲವೊಂದು ಟಿಪ್ಸ್ ತಿಳಿದುಕೊಳ್ಳುವ ಮೂಲಕ ಆ ಕುರಿತು ಮಾಹಿತಿ ತಿಳಿದುಕೊಳ್ಳೋಣ.
ದದ್ದುಗಳು/ಕೆಂಪು
ನಾವು ಬಳಸುವ ಬ್ಯೂಟಿ ಕ್ರೀಮ್‌ಗಳನ್ನು ಹಚ್ಚಿದ ಬಳಿಕ ಅಥವಾ ಕೆಲವು ದಿನಗಳಲ್ಲಿ ನಿಮ್ಮ ಮುಖದಲ್ಲಿ ಕೆಂಪು ಕಲೆಗಳು, ದದ್ದುಗಳು ಮೂಡಿದರೆ ಆ ಕ್ರೀಮ್ ಅನ್ನು ಬಳಸಬಾರದು ಎಂದು ಶೋಭಾ ಅವರು ಹೇಳುತ್ತಾರೆ. 'ಈ ಕ್ರೀಮ್‌ಗಳು ಬಹುತೇಕ ನಿಮ್ಮ ಚರ್ಮಕ್ಕೆ ಹೊಂದಾಣಿಕೆ ಆಗದೆ ಇರಬಹುದು. ಅದರ ಲಕ್ಷಣವಾಗಿ ಮುಖದಲ್ಲಿ ಕೆಂಪು ಕಲೆಗಳು ಮೂಡಲು ಆರಂಭಿಸುತ್ತವೆ. ಅದರಲ್ಲೂ ಮುಖ್ಯವಾಗಿ ಕಣ್ಣುಗಳ ಸುತ್ತ ಹಾಗೂ ಮೂಗಿನ ಮೇಲ್ಭಾಗದಲ್ಲಿ ಉಂಟಾಗುವ ಕೆಂಪು ರಾಷಸ್‌ಗಳು ನೀವು ಬಳಸುವ ಕ್ರೀಮ್‌ನಿಂದಾಗಿ ರಿಯಾಕ್ಷನ್ ಆಗಿರುತ್ತೆ.
ಮುಖ ಒಣಗುವುದು
ಕೆಲವೊಂದು ಕ್ರೀಮ್ ಹಚ್ಚಿದಾಗ ನಿಮ್ಮ ಮುಖವು ಒಣಗಿದ ಅನುಭವವಾಗುತ್ತದೆ. ಹೀಗಾಗಿ ಮತ್ತೆ ನೀವು ಮೋಯಿಶ್ಚರೈಸ್ ಕ್ರೀಮ್ ಹಚ್ಚುತ್ತೀರಿ. ಆದ್ರೆ ಮುಖದ ಚರ್ಮ ಒಣಗಿದ ಅನುಭವ ಆಗುವುದು ಆ ಕ್ರೀಮ್ ನಿಮ್ಮ ತ್ವಚೆಗೆ ಸರಿಹೊಂದುತ್ತಿಲ್ಲ ಎಂದರ್ಥ. ಹೀಗಾಗಿ ಅಂತಹ ಸಂದರ್ಭದಲ್ಲಿ ಕ್ರೀಮ್ ಬಳಕೆ ನಿಲ್ಲಿಸುವುದು ಉತ್ತಮ.
ಮೊಡವೆಗಳು ಮೂಡುವುದು
ನೀವು ಯಾವುದಾದರು ಸೌಂದರ್ಯ ವರ್ಧಕ ಕ್ರೀಮ್ ಬಳಸಿದಾಗ ನಿಮ್ಮ ಮುಖದಲ್ಲಿ ಮೊಡವೆಗಳು ಮೂಡಿದರೆ ಅದು ಕ್ರೀಮ್ ನಿಮ್ಮ ತ್ವಚೆಗೆ ಹೊಂದುತ್ತಿಲ್ಲ ಎಂದರ್ಥ. ಕೆಲವೊಮ್ಮೆ ಈ ಮೊಡವೆಗಳು ತುಂಬಾ ದೊಡ್ಡದಾಗಿ ಕಾಣಿಸಿಕೊಳ್ಳುತ್ತವೆ. ಹಾಗೆ ಎರಡರಿಂದ ಮೂರು ಮೊಡವೆಗಳು ಏಕಕಾಲದಲ್ಲಿ ಮೂಡಬಹುದು. ಇದು ಕೂಡ ಕ್ರೀಮ್ ನಿಮಗೆ ಸರಿಹೊಂದುತ್ತಿಲ್ಲ ಎಂಬ ಅರ್ಥ ನೀಡಲಿದೆ.