ತಿರುವನಂತಪುರಂ: ಪಡಿತರ ವ್ಯಾಪಾರಿಗಳು ಅಂಗಡಿ ಮುಷ್ಕರ ಹಿಂತೆಗೆದುಕೊಂಡಿದ್ದರೂ ರಾಜ್ಯದ ಎಲ್ಲಾ ಪಡಿತರ ಅಂಗಡಿಗಳು ತೆರೆದಿಲ್ಲ ಎಂಬುದು ಗಮನಕ್ಕೆ ಬಂದಿದೆ ಮತ್ತು ಈ ಕುರಿತು ವರದಿ ಸಲ್ಲಿಸುವ ಜವಾಬ್ದಾರಿಯನ್ನು ರಾಜ್ಯ ಪಡಿತರ ನಿಯಂತ್ರಕರಿಗೆ ವಹಿಸಲಾಗಿದೆ ಎಂದು ಸಚಿವ ಜಿ.ಆರ್. ಅನಿಲ್ ಹೇಳಿರುವರು.
ಸಾಕಷ್ಟು ಕಾರಣಗಳಿಲ್ಲದೆ ಪಡಿತರ ಅಂಗಡಿಯನ್ನು ಮುಚ್ಚುವ ಹಕ್ಕು ಪರವಾನಗಿದಾರರಿಗೆ ಇಲ್ಲ ಮತ್ತು ಪಡಿತರ ವಿತರಣೆಗೆ ಅಡ್ಡಿಪಡಿಸುವ ಯಾವುದೇ ಕೃತ್ಯವನ್ನು ಶಿಸ್ತಿನ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ ಎಂದು ಸಚಿವರು ಹೇಳಿದರು. ಪಡಿತರ ಚೀಟಿ ಹೊಂದಿರುವವರಿಗೆ ಜನವರಿ ತಿಂಗಳ ಆಹಾರ ಧಾನ್ಯಗಳು ಎರಡು ದಿನಗಳಲ್ಲಿ ಒದಗಿಸಬೇಕು. ಪಡಿತರ ಅಂಗಡಿಗಳಲ್ಲಿ ಸ್ಟಾಕ್ ಖಾಲಿಯಾಗಿದೆ ಮತ್ತು ಅಂಗಡಿಗಳು ಖಾಲಿಯಾಗಿವೆ ಎಂಬ ಕೆಲವು ಮಾಧ್ಯಮಗಳ ವರದಿಗಳು ಸುಳ್ಳು. ಡಿಸೆಂಬರ್ ತಿಂಗಳ ಹಣವನ್ನು ಎಲ್ಲಾ ವ್ಯಾಪಾರಿಗಳ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದು ಸಚಿವರು ಹೇಳೀರುವರು.