ಮಹಾಕುಂಭ ನಗರ : '...ಬಹುಸಂಖ್ಯಾತರಿಗೆ ಬೇಕಾದಂತೆ ದೇಶವು ನಡೆಯಬೇಕು. ಅದುವೇ ಕಾನೂನು...' ಎಂದಿದ್ದ ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರು ರಾಮ ಮಂದಿರಕ್ಕಾಗಿ ನಡೆದ ಹೋರಾಟ ಕುರಿತು ಜ.22ರಂದು ಇಲ್ಲಿ ನಡೆಯಬೇಕಿದ್ದ ಸೆಮಿನಾರ್‌ನಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ.
ರಾಮ ಮಂದಿರ ದೇವಾಲಯ ನಿರ್ಮಾಣಗೊಂಡು ವರ್ಷ ಕಳೆದ ಸಂಭ್ರದ ಆಚರಣೆಗಾಗಿ 'ರಾಷ್ಟ್ರೀಯ ಸಂಗೋಷ್ಠಿ: ರಾಮ ಮಂದಿರ ಆಂದೋಲನ ಮತ್ತು ಗೋರಕ್ಷಾಪೀಠ' ಹೆಸರಿನ ಸೆಮಿನಾರ್ ಅನ್ನು ಮಹಾಕುಂಭ ನಗರದಲ್ಲಿ ಆಯೋಜಿಸಲಾಗಿತ್ತು.
'ಜ.22 ಕೆಲಸದ ದಿನವಾಗಿದ್ದರಿಂದ ಸೆಮಿನಾರ್‌ನಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ' ಎಂದು ನ್ಯಾಯಮೂರ್ತಿ ಶೇಖರ್ ಅವರು ತಿಳಿಸಿದರು' ಎಂದು ಸೆಮಿನಾರ್‌ನ ಆಯೋಜಕರು ಶನಿವಾರ ತಿಳಿಸಿದರು. ಶೇಖರ್ ಅವರು ಈ ಸೆಮಿನಾರ್‌ನಲ್ಲಿ ಮುಖ್ಯ ಭಾಷಣಕಾರರಾಗಿದ್ದರು.