ಕುಂಬಳೆ: ಚಾಲಕ ಮದ್ಯದ ನಶೆಯಲ್ಲಿ ಗೂಗಲ್ ಮ್ಯಾಪ್ ನೋಡುತ್ತಾ ಚಲಾಯಿಸಿಕೊಂಡು ಬಂದ ಲಾರಿ ಅಂಗಡಿಗೆ ಡಿಕ್ಕಿಯಾಗಿದೆ. ಕುಂಬಳೆ ಪೇಟೆಯ ಪೊಲೀಸ್ ಠಾಣೆ ಸನಿಹದ ಅಂಗಡಿಗೆ ಮಂಗಳವಾರ ಸಂಜೆ ಲಾರಿ ನುಗ್ಗಿದ್ದು, ಈ ಸಂದರ್ಭ ಸ್ಥಳದಲ್ಲಿ ಯಾರೂ ಇಲ್ಲದಿದ್ದ ಕಾರಣ ಪ್ರಾಣಾಪಾಯ ತಪ್ಪಿದೆ. ಪ್ರಕರಣಕ್ಕೆ ಸಂಬಂಧಿಸಿ ಚಾಲಕ ತಲಶ್ಯೇರಿ ನಿವಾಸಿ ರನಿಲ್ ಎಂಬಾತನ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಅಂಗಡಿಗೆ ಹಾನಿ ಸಂಭವಿಸಿದೆ.
ಸೀತಾಂಗೋಳಿಯಿಂದ ಮಂಗಳೂರಿಗೆ ಸರಕು ಸಾಗಿಸುತ್ತಿದ್ದ ಸಂದರ್ಭ ಅಪಘಾತ ಸಂಭವಿಸಿದೆ. ಮೊಬೈಲ್ ಮೂಲಕ ಗೂಗಲ್ ಮ್ಯಾಪ್ ನೋಡುತ್ತಾ ನಿರ್ಲಕ್ಷ್ಯದಿಂದ ಲಾರಿ ಚಲಾಯಿಸಿಕೊಂಡು ಬಂದಿದ್ದ ಈತ ಮದ್ಯಪಾನ ನಡೆಸಿದ್ದನೆನ್ನಲಾಗಿದೆ.