ಕುಂಬಳೆ : ಫೆಬ್ರುವರಿ 11 ಮತ್ತು 12 ರಂದು ನಡೆಯಲಿರುವ ಪಡ್ಡಯಿ ಧೂಮಾವತಿ ದೈವದ ನೇಮೋತ್ಸವವನ್ನು ವಿಜೃಂಭಣೆಯಿಂದ ಯಶಸ್ವಿಯಾಗಿ ನಡೆಸುವುದಕ್ಕಾಗಿ ಪೂರ್ವಭಾವಿ ಸಭೆ ಇತ್ತೀಚೆಗೆ ಪೆರ್ಣೆ ಕಳ ಧೂಮಾವತಿ ದೈವ ಸಾನಿಧ್ಯದ ವಠಾರದಲ್ಲಿ ಸಮಿತಿಯ ಅಧ್ಯಕ್ಷ ಶ್ರೀಕೃಷ್ಣಯ್ಯ ಅನಂತಪುರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ನೇಮೋತ್ಸವದ ಯಶಸ್ವಿಗಾಗಿ ಈ ಸಂದರ್ಭದಲ್ಲಿ ವಿವಿಧ ಉಪ ಸಮಿತಿಗಳನ್ನು ರೂಪೀಕರಿಸಲಾಯಿತು.
ನಾನು ಎಂಬ ಭಾವವನ್ನು ಬಿಟ್ಟು ನಾವು ಎಂಬ ಭಾವದಿಂದ ಕಾರ್ಯಪ್ರವೃತ್ತರಾಗುವ ಇಲ್ಲಿನ ಕಾರ್ಯಕರ್ತರನ್ನು ಪ್ರಶಂಸಿಸಿ ಇಲ್ಲಿ ನಡೆಯುವ ನೇಮೋತ್ಸವ ಇಡೀ ನಾಡಿಗೆ ಮಾದರಿ ಎಂಬುದಾಗಿ ಸಭಾಧ್ಯಕ್ಷತೆಯನ್ನು ವಹಿಸಿ ಶ್ರೀಕೃಷ್ಣಯ್ಯ ಅನಂತಪುರ ತಿಳಿಸಿದರು.
ವೇದಿಕೆಯಲ್ಲಿ ರಾಜಶೇಖರ ಮಾಸ್ತರ್ ಅನಂತಪುರ ಮತ್ತು ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಮಿತಿ ಸದಸ್ಯೆ ಸರಸ್ವತಿ ಪೆರ್ಣೆ ಅವರು ಸೇವಾರೂಪದಲ್ಲಿ ಅಡುಗೆ ಪಾತ್ರೆಗಳನ್ನು ಅಧ್ಯಕ್ಷರ ಮುಖಾಂತರ ಸಮಿತಿಗೆ ಹಸ್ತಾಂತರಿಸಿದರು.
ಕೋಶಾಧಿಕಾರಿ ರಮೇಶ್ ಪೆರ್ಣೆ ಲೆಕ್ಕ ಪತ್ರ ಮಂಡಿಸಿದರು. ಕಾರ್ಯದರ್ಶಿ ತಿರುಮಲೇಶ ಪೆರ್ಣೆ ಮತ್ತಿತರರು ಸಲಹೆ ಸೂಚನೆಗಳನ್ನು ನೀಡಿದರು. ವಂದನ ಪೆರ್ಣೆಮತ್ತು ಲಾವಣ್ಯ ಪೆರ್ಣೆ ಪ್ರಾರ್ಥನೆಯನ್ನು ಹಾಡಿದರು. ದಯಾನಂದ ಪೆರ್ಣೆ ಸ್ವಾಗತಿಸಿ, ವಿಜಯಕುಮಾರ ಅನಂತಪುರ ವಂದಿಸಿದರು. ಸತ್ಯಶಂಕರ ಅನಂತಪುರ ಕಾರ್ಯಕ್ರಮ ನಿರೂಪಿಸಿದರು.