ಕಾಸರಗೋಡು: ಮುಳಿಯಾರು ಪಂಚಾಯಿತಿಂiÀ ಬೋವಿಕ್ಕಾನ ಪೇಟೆಯಲ್ಲಿ ಮತ್ತೆ ಚಿರತೆ ಕಾಣಿಸಿಕೊಂಡಿದೆ. ಕುಟ್ಯಾನಂ ಅರಿಯಿಲ್ ನಿವಾಸಿ ಕೃಷ್ಣನ್ ಎಂಬವರ ಮನೆಯ ಸಾಕುನಾಯಿಯನ್ನು ಹೊತ್ತೊಯ್ದಿದ್ದರೆ, ಸನಿಹದ ಇನ್ನೊಂದು ನಾಯಿಯ ಮೇಲೆ ದಾಳಿ ನಡೆಸಿ ಗಾಯಗೊಳಿಸಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಬೋವಿಕ್ಕಾನದ ಮಸೀದಿ ಸನಿಹದಿಂದ ಚಿರತೆ ಸಂಚರಿಸುತ್ತಿರುವುದನ್ನು ಅಬ್ದುಲ್ ಖಾದರ್ ಎಂಬವರು ಕಂಡಿದ್ದು, ಸ್ಕೂಟರಲ್ಲಿ ತೆರಳುತ್ತಿದ್ದ ಅಸೀಸ್ ಎಂಬವರೂ ಚಿರತೆಯನ್ನು ಕಂಡಿರುವುದಾಗಿ ಮಾಹಿತಿ ನೀಡಿದ್ದಾರೆ. ಚಿಪ್ಲಿಕಯ ಎಂಬಲ್ಲಿ ಚಿರತೆ ಕಾಣಿಸಿಕೊಂಡಿರುವ ಬಗ್ಗೆ ಲಭಿಸಿದ ಮಾಹಿತಿಯನ್ವಯ ಸ್ಥಳಕ್ಕಾಗಮಿಸಿದ ಯುವಕರು ದೂರದಿಂದ ಚಿರತೆಯ ಚಿತ್ರ ಸೆರೆಹಿಡಿದಿದ್ದಾರೆ. ಸಣ್ಣಗಾತ್ರದ ಚಿರತೆ ಇದಾಗಿತ್ತು.
ಹೋರಾಟದ ಎಚ್ಚರಿಕೆ:
ಕಳೆದ ಐದಾರು ತಿಂಗಳಿಂದ ಮುಳಿಯಾರು ಪಂಚಾಯಿತಿಯ ಆಸುಪಾಸು ಚಿರತೆ ಸಂಚರಿಸುತ್ತಿರುವ ಬಗ್ಗೆ ನಿರಂತರ ದೂರು ನೀಡುತ್ತಾ ಬಂದಿದ್ದರೂ, ಈ ವಿಷಯವನ್ನು ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸದಿರುವುದನ್ನು ಖಂಡಿಸಿ ಬೋವಿಕ್ಕಾನದಲ್ಲಿ ಜನಾಂದೋಲನ ನಡೆಸಲು ಇಲ್ಲಿನ ಜನತೆ ತೀರ್ಮಾನಿಸಿದ್ದಾರೆ. ಚಿರತೆ ಕಾಣಿಸಿಕೊಂಡಿರುವ ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಇಲ್ಲಿನ ಜನರಲ್ಲಿ ಧೈರ್ಯ ತುಂಬುವ ಕೆಲಸ ನಡೆಸಬೇಕು ಎಂದು ಮುಸ್ಲಿಂ ಲೀಗ್ ಮುಖಂಡ ಕೆ.ಬಿ ಮಹಮ್ಮದ್‍ಕುಞÂ ಆಗ್ರಹಿಸಿದ್ದಾರೆ.