HEALTH TIPS

ಕೃತಕ ಸೂರ್ಯನ ಬೆಳಗಿಸಿದ ಚೀನಾ: ಶಕ್ತಿ ಉತ್ಪಾದನೆಗಾಗಿ ಹೊಸ ಪ್ರಯೋಗ!

ಬೀಜಿಂಗ್:  ಶಕ್ತಿ ಉತ್ಪಾದನೆಗಾಗಿ ಚೀನಾ ಕೈಗೊಂಡಿರುವ ಪರಮಾಣು ಸಮ್ಮಿಲನ ಪ್ರಯೋಗದ ಭಾಗವಾಗಿ ಸೃಷ್ಟಿಸಲಾಗಿರುವ 'ಕೃತಕ ಸೂರ್ಯ'ನಮೇಲಿನ ಶಾಖವು ಸತತ 1 ಸಾವಿರ ಸೆಕೆಂಡುಗಳ ಕಾಲ (17 ನಿಮಿಷ) 100 ದಶಲಕ್ಷಡಿಗ್ರಿ ತಾಪಮಾನದ ಸ್ಥಿರತೆ ಕಾಯ್ದುಕೊಂಡಿದೆ. 

ಈ ಮೂಲಕ 2023 ರಲ್ಲಿ 403 ಸೆಕೆಂಡುಗಳ ಕಾಲ ಈ ಸಾಧನೆ ಮಾಡಿದ ತನ್ನದೇ ದಾಖಲೆಯನ್ನು ಚೀನಾ ಮುರಿದಿದೆ.

ಈ ಕುರಿತು ಮಾಹಿತಿ ನೀಡಿದ ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್‌ನ ಪ್ಲಾಸ್ಮಾ ಫಿಸಿಕ್ಸ್ ಸಂಸ್ಥೆಯ ನಿರ್ದೇಶಕ ಸಾಂಗ್ ಯುನ್ನಾಒ, 'ನಿರಂತರಶಕ್ತಿ ಉತ್ಪಾದನೆಗೆ ಅವಶ್ಯಕವಾಗಿರುವ ಪ್ಲಾಸ್ಮಾದ ಸತತ ಪರಿಚಲನೆಗೆ ಸಮ್ಮಿಲನ ಸಾಧನವು ಸಾವಿ ರಾರು ಸೆಕೆಂಡುಗಳ ಕಾಲ ಸ್ಥಿರವಾಗಿ ಕಾರ್ಯಾಚರಿಸಬೇಕು.

ಇದನ್ನು ಸಾಧಿಸಿದ್ದೇವೆ' ಎಂದರು. ಅಂತೆಯೇ, 'ಸಮ್ಮಿಲನ ಶಕ್ತಿಯನ್ನು ಬಳಕೆಗೆ ತರಲು ಇಎಎಸ್‌ಟಿ (ಕೃತಕ ಸೂರ್ಯ) ಮೂಲಕ ಅಂತಾರಾಷ್ಟ್ರೀಯ ಸಹಯೋಗ ವಿಸ್ತರಿಸಲು ಆಶಿಸಿದ್ದೇವೆ' ಎಂದರು.

ಅಂದಹಾಗೆ, ಪರಮಾಣು ಸಮ್ಮಿಲನ ಸ್ವಂತವಾಗಿ ಶಕ್ತಿಯನ್ನು ಸೃಷ್ಟಿಸಿ ಅದನ್ನು ಕಾಯ್ದುಕೊಳ್ಳಲು ಅಗತ್ಯವಾದ ಇಗ್ಲೀಷನ್ (ದಹನ) ಪ್ರಕ್ರಿಯೆಯನ್ನು ಇನ್ನೂ ಆರಂಭಿಸಿಲ್ಲ. ಇದರ ಪ್ರಯೋಗವನ್ನು ಚೀನಾದ ವಿಜ್ಞಾನಿಗಳು 2006ರಲ್ಲೇ ಆರಂಭಿಸಿದ್ದು, ನೂರಾರು ಪರೀಕ್ಷೆಗಳನ್ನು ನಡೆಸಿದ್ದಾರೆ.

ಚೀನಾ ಪ್ರಯೋಗದ ಉದ್ದೇಶವೇನು?

ಹೈಡೋಜನ್ ಮತ್ತು ಡ್ಯೂಟೇರಿಯಮ್‌ಗಳಂತಹ ಅನಿಲಗಳನ್ನು ಇಂಧನವಾಗಿ ಬಳಸಿ, ವಿಜ್ಞಾನಿಗಳು ಸೂರ್ಯನಿಗೆ ಶಕ್ತಿ ನೀಡುವ ಸಮ್ಮಿಲನ ಪ್ರಕ್ರಿಯೆ ನಡೆಸುತ್ತಿದ್ದಾರೆ. ಭವಿಷ್ಯದಲ್ಲಿ ಇದನ್ನು ಮಾಲಿನ್ಯಕಾರಕ ಅಲ್ಲದ ಸ್ವಚ್ಛ, ಸುರಕ್ಷಿತ ಹಾಗೂ ಬರಿದಾಗದ ಇಂಧನ ಮೂಲವಾಗಿ ಬಳಸುವ ಉದ್ದೇಶವಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries