HEALTH TIPS

ಅಡ್ಕ ಗೋಪಾಲಕೃಷ್ಣ ಭಟ್ಟರಿಗೆ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಯಕ್ಷಸಿರಿ ಪ್ರಶಸ್ತಿ

ಮುಳ್ಳೇರಿಯ: ಕರ್ನಾಟಕ ಯಕ್ಷಗಾನ ಅಕಾಡೆಮಿ ಶುಕ್ರವಾರ ಪ್ರಕಟಿಸಿರುವ 2024ನೇ ಸಾಲಿನ ಯಕ್ಷಸಿರಿ ವಾರ್ಷಿಕ ಪ್ರಶಸ್ತಿಗೆ ಕಾಸರಗೋಡಿನ ಹಿರಿಯ ಯಕ್ಷಗಾನ ಅರ್ಥಧಾರಿ ಅಡ್ಕ ಗೋಪಾಲಕೃಷ್ಣ ಬಟ್ ಆಯ್ಕೆಯಾಗಿದ್ದಾರೆ.

ಬಾಲ್ಯದಲ್ಲೇ ಯಕ್ಷಗಾನ ಅರ್ಥಧಾರಿಯಾಗಿ ರಂಗಪ್ರವೇಶಿಸಿದ ಅಡ್ಕ ಗೋಪಾಲಕೃಷ್ಣ ಭಟ್ ಅವರು ಎಡನೀರು ಸ್ವಾಮೀಜೀಸ್ ಶಾಲೆಯಲ್ಲಿ ವಿದ್ಯಾರ್ಭಯಾಸ ಗೈಯ್ಯುತ್ತಿರುವಾಗಲೇ ಬ್ರಹ್ಮಖ್ಯ ಶ್ರೀಕೇಶವಾನಂದ ಭಾರತೀ ಪಾದಂಗಳ ಆಶೀರ್ವಾದಗಳೊಂದಿಗೆ ನಾಟಕ ಹಾಗೂ ಯಕ್ಷಗಾನದಲ್ಲಿ ಪಾತ್ರಧಾರಿಯಾಗಿ ರಂಗಪ್ರವೇಶಗೈದಿದ್ದರು. ಮಧೂರು ಗಣಪತಿ ಅವರಿಂದ ನಾಟ್ಯಾಭ್ಯಾಸಗೈದು ಕಂಸ, ಮಹಿಷಾಸುರ, ಜರಾಸಂಧ, ರಕ್ತಬೀಜ, ಇಂದ್ರಜಿತು ಮುಂತಾದ ಖಳನಾಯಕ ಪಾತ್ರದಲ್ಲಿ ವೇಶ ಹಾಗೂ ಅರ್ಥಧಾರಿಯಾಗಿ ಗುರುತಿಸಿಕೊಂಡಿದ್ದರು.

ತಾಳಮದ್ದಳೆ ಕ್ಷೇತ್ರದಲ್ಲಿ ಹಂತಹಂತವಾಗಿ ಮೇಲೇರುತ್ತಾ ದಿ.ಶೇಣಿ ಗೋಪಾಲಕೃಷ್ಣ ಭಟ್ಟರ ಗರಡಿಯಲ್ಲಿ ಪಳಗಿ ಅಂದಿನ ಹಿರಿಯ ಪ್ರಬುದ್ಧ ಅರ್ಥಧಾರಿಗಳಾಗಿದ್ದ ಮಲ್ಪೆ ಸಾಮಗರು, ದೇರಾಜೆ ಸೀತಾರಾಮಯ್ಯ, ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್, ಪೆರ್ಲ ಕೃಷ್ಣ ಭಟ್, ಪೊಳಲಿ ಪುಟ್ಟಣ್ಣ ಗೌಡ, ಗಣಪತಿ ಕಂಜರ್ಪಣೆ, ತೆಕ್ಕಟ್ಟೆ ಆನಂದ ಮಾಸ್ತರ್, ಕುಂಬಳೆ ಸುಂದರ ರಾವ್, ಕಾಂತ ರೈಮೊದಲಾದ ದಿಗ್ಗಜರೊಂದಿಗೆ ಹಾಗೂ ಸಮಕಾಲೀನ ಅರ್ಥಧಾರಿಗಳಾದ ಡಾ.ರಮಾನಂದ ಬನಾರಿ, ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಮೊದಲಾದವರೊಂದಿಗೆ ಯಕ್ಷಗಾನ ರಂಗದಲ್ಲಿ ಸಮಸಾಟಿಯಾಗಿ ತೊಡಗಿಸಿಕೊಂಡಿದ್ದರು. ವೇಷಧಾರಿಗಳಾದ ಸವ್ಯಸಾಚಿ ಸೂರಿಕುಮೇರಿ ಗೋವಿಂದ ಭಟ್, ಕುಂಬ್ಳೆ ಶ್ರೀಧರ ರಾವ್ ಮೊದಲಾದವರೊಂದಿಗೆ ವೇಷಧಾರಿಯಾಗಿ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಪ್ರಸ್ತುತ ವಯೋಸಹಜ ನಿಶಕ್ತಿಯಿಂದ ಸ್ವಗೃಹದಲ್ಲಿ ವಿಶ್ರಾಂತಿಯಲ್ಲಿದ್ದಾರೆ. 

 ತಮ್ಮ ಯುವ ಹರೆಯಲ್ಲಿ ರಚಿಸಿದ ಕೋಟೂರಿನ ಕಾರ್ತಿಕೇಯ ಯಕ್ಷಗಾನ ಸಂಘದ ಮೂಲಕ ಹಲವು ಕಲಾವಿದರನ್ನು ತಯಾರಿಸಿ ಯಕ್ಷಗಾನ ರಂಗಕ್ಕೆ ನೀಡಿದ್ದಾರೆ. ಈಗಲೂ ಈ ಸಂಘ ಕಾರ್ಯನಿರ್ವಹಿಸುತ್ತಿದೆ. 1972ರಲ್ಲಿ ಮಲೆಯಾಳಂನಲ್ಲಿ ಕೊಲ್ಲೂರು ಕ್ಷೇತ್ರ ಸಹಿತ ಹಲವು ಪ್ರಸಂಗಗಳನ್ನು ಕೇರಳದಾತ್ಯಂತ ತಂಡವನ್ನೊಯ್ದು ಪ್ರದರ್ಶಿಸಿದ ಕೀರ್ತಿ ಅಡ್ಕ ಗೋಪಾಲಕೃಷ್ಣ ಭಟ್ಟರ ಹಿರಿಮೆ. ಕೇರಳ ರಾಜ್ಯ ಕಲೋತ್ಸವದಲ್ಲಿ ಯಕ್ಷಗಾನವನ್ನು ಸ್ಪರ್ಧೆಯಾಗಿ ಸೇರಿಸಲು ಸರ್ಕಾರವನ್ನು ಒಡಂಬಡಿಸಿ ಯಶಸ್ವಿಯಾಗಲು ಕಾರಣಕರ್ತರಾದವರು ಅಡ್ಕ ಅಜ್ಜ ಎಂಬುದು ಹೊಸ ತಲೆಮಾರಿಗೆ ಗೊತ್ತಿರದ ಗಮನಾರ್ಹ ವಿಷಯವಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries