HEALTH TIPS

ಪ್ರೊ.ಪಿ.ಶ್ರೀಕೃಷ್ಣ ಭಟ್ಟರ ವ್ಯಾಪಕರಣ-ಭಾಷಾ ಕೈಂಕರ್ಯ ಕರಾವಳಿಯಿಂದ ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಮಹಾನ್ ಕೊಡುಗೆ-ಡಾ.ಬಿಳಿಮಲೆ

ಬದಿಯಡ್ಕ:ಭಾಷೆಗಳ ಬಳಕೆ ಕಡಿಮೆಯಾದಂತೆ ಅದರ ಶ್ರೀಮಂತ ಪಂಡಿತ ಪರಂಪರೆಯೂ ಕುಸಿಯತೊಡಗುತ್ತದೆ. ಕರ್ನಾಟಕದ ಹೊರ ರಾಜ್ಯಗಳಲ್ಲಿ ಇಂದು ಕನ್ನಡದ ಕಲಿಕೆ-ಅಧ್ಯಯನ ಗಂಭೀರವಾಗಿ ಕಡಿಮೆಯಾಗಿರುವ ಮಧ್ಯೆ ಗಡಿನಾಡು ಕಾಸರಗೋಡಲ್ಲಿ ಅದರದ್ದೇ ವಿಶಿಷ್ಟತೆಯಲ್ಲಿ ಕನ್ನಡ ಭಾಷೆಯ ಕಲಿಕೆ, ಅಧ್ಯಯನಕ್ಕೆ ಹೆಚ್ಚಿನ ಆಸಕ್ತರಿರುವುದು ಸ್ತುತ್ಯರ್ಹ ಎಂದು ಕರ್ನಾಟಕದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅಭಿಪ್ರಾಯ ವ್ಯಕ್ತಪಡಿಸಿದರು.  

ಭಾನುವಾರ ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ವಿದ್ಯಾಲಯದಲ್ಲಿ ನಡೆದ ಹಿರಿಯ ವಿದ್ವಾಂಸ, ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಪ್ರೊ.ಪಿ.ಶ್ರೀಕೃಷ್ಣ ಭಟ್ ಅವರ ಸಹಸ್ರಚಂದ್ರ ದರ್ಶನ ಅಭಿನಂದನಾ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.

ಕರಾವಳಿಯ ಕನ್ನಡ-ತುಳು ಪಂಡಿತ ಪರಂಪರೆ ವಿಶಾಲವಾದ ಅಡಿಗಲ್ಲನ್ನು ಭಾಷಾಶಾಸ್ತ್ರದಲ್ಲಿ ಪ್ರಬಲವಾಗಿ ದಾಖಲಿಸಿದ್ದಾರೆ. ಪೊಳಲಿ ಶೀನಪ್ಪ ರೈಗಳ ಸ್ಥಳನಾಮ ಹಾಗೂ ಪಾಡ್ದನ ಅಧ್ಯಯನ, ಗಣಪತಿ ರಾವ್ ಐಗಳ್ ಅವರ ಕ್ಷೇತ್ರ ಅಧ್ಯಯನ, ಮಂಜೇಶ್ವರ ಗೋವಿಂದ ಪೈಗಳ ಭಾಷಾಶಾಸ್ತ್ರ, ಮಾನ ಶಾಸ್ತ್ರಗಳೇ ಮೊದಲಾದ ಕಳೆದ ಶತಮಾನದ ಆರಂಭದ ವಿಸ್ಕøತ ಅಧ್ಯಯನಗಳು ಅಭೂತಪೂರ್ವವಾದ ಸಾಧನೆಗಳಾಗಿದ್ದವು. ಸೇಡಿಯಾಪು ಕೃಷ್ಣ ಭಟ್ಟರಂತಹ ಶ್ರೇಷ್ಠ ವ್ಯಾಕರಣ ಚಿಂತನೆಗಳ ಬಳಿಕದ ಕಾಲಘಟ್ಟದಲ್ಲಿ ಪ್ರೊ.ಪಿ.ಕೃಷ್ಣ ಭಟ್ಟರ ಅಧ್ಯಯನ  ಫ್ರೌಢಿಮೆ, ವ್ಯಾಪರಣ ಭಾಷೆಗೆ ಅವರೊದಗಿಸಿದ ಹೊಸದಿಕ್ಕುಗಳು ಅಪೂರ್ವವೆಂದು ಅವರು ತಿಳಿಸಿದರು.


ಮಹಾಜನ ವಿದ್ಯಾಸಂಸ್ಥೆಗಳ ಪ್ರಬಂಧಕ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಪ್ರೊ.ಪಿ.ಶ್ರೀಕೃಷ್ಣ ಭಟ್ಟರ ಅಭಿನಂದನಾ ಗ್ರಂಥ ಶ್ರೀಪಥವನ್ನು ಈ ಸಂದರ್ಭ ಬೆಂಗಳೂರಿನ ವಿಶ್ರಾಂತ ಪ್ರಾಧ್ಯಾಪಕ ಡಾ.ಬಸವರಾಜ ಕಲ್ಗುಡಿ ಬಿಡುಗಡೆಗೊಳಿಸಿದರು. ಅಭಿನಂದನಾ ಗ್ರಂಥದ ಸಂಪಾದಕಿ, ನಿವೃತ್ತ ಪ್ರಾಧ್ಯಾಪಕಿ ಡಾ.ಯು.ಮಹೇಶ್ವರಿ ಗ್ರಂಥದ ಒಳಬೆಳಕುಗಳನ್ನು ವಿವರಿಸಿದರು. ಈ ಸಂದರ್ಭ ವಿಶ್ರಾಂತ ಪ್ರಾಧ್ಯಾಪಕ ಡಾ.ಎನ್.ಎಸ್.ತಾರಾನಾಥ ಅವರು ಪ್ರೊ.ಪಿ.ಶ್ರೀಕೃಷ್ಣ ಭಟ್ಟರ ಅವಲೋಕನ ಮತ್ತು ಅರಿವಿನ ನೆಲೆ ಹುಡುಕಿ ಕೃತಿ ಬಿಡುಗಡೆಗೊಳಿಸಿದರು. ಪ್ರೊ.ಪಿ.ಕೃಷ್ಣ ಭಟ್ಟರ ವಿದ್ಯಾರ್ಥಿಗಳು ಬರೆದಿರುವ ಶ್ರೀಪಥ, ಅವಲೋಕನ, ವ್ಯಾಸಭಾರತದ ದ್ರೌಪದಿ, ಸಿದ್ದಾರ್ಥ, ವನಮಯೂರಿ, ಚಿಗುರು, ಸಾಹಿತ್ಯ ಸೌರಭ, ಕಾಡದಿರೆನ್ನ ನೋವುಗಳೇ, ಸರೋವರದ ಸನ್ನಿಧಿಯಲ್ಲಿ, ಸಾಹಿತ್ಯೋಪಾಸನೆ, ಅನುವಾದ ಕತೆಗಳು ಭಾಗ-2, ಕಾಸರಗೋಡು ಕನ್ನಡಂಗಳು, ಸಾಮದರ್ಭಿಕ, ಹುಂ ಕೃತಿಗಳನ್ನು ಪ್ರೊ.ಪಿ.ಕೃಷ್ಣ ಭಟ್ಟರು ಅಲಂಕೃತ ತೊಟ್ಟಿಲಿನಿಂದ ಬಿಡುಗಡೆಗೊಳಿಸಿದರು.ಪ್ರೊ.ಪಿ.ಎನ್,ಮೂಡಿತ್ತಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಭಿನಂದನಾ ಸಮಿತಿಯ ರಾಧಾಕೃಷ್ಣ ಬೆಳ್ಳೂರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.ಸಮಿತಿ ಕೋಶಾಧಿಕಾರಿ ಶ್ರೀಧರ ಏತಡ್ಕ ವಂದಿಸಿದರು. ಯತೀಶ್ ಕುಮಾರ್ ಮುಳ್ಳೇರಿಯ ಹಾಗೂ ಡಾ. ವಿದ್ಯಾಲಕ್ಷ್ಮೀ ಬೇಳ ನಿರೂಪಿಸಿದರು.ಶ್ರದ್ಧಾ ನಾಯರ್ಪಳ್ಳ ಹಾಗೂ ಶ್ರೀವಾಣಿ ಕಾಕುಂಜೆ ಅವರು ಷಷ್ಪದಿ ಕಾವ್ಯವಾಚನಗೈದರು.

ಬಳಿಕ ನಡೆದ ವಿಚಾರಗೋಷ್ಠಿಯಲ್ಲಿಯಲ್ಲಿ ಪೆÇ್ರ.ಶ್ರೀಕೃಷ್ಣಭಟ್ಟರ ಬರವಣಿಗೆಯ ಕುರಿತು ವಿಚಾರ ಮಂಥನ ನಡೆಯಿತು. ವಿಶ್ರಾಂತ ಪ್ರಾಧ್ಯಾಪಕ ಡಾ. ತಾಳ್ತಜೆ ವಸಂತಕುಮಾರ ಅಧ್ಯಕ್ಷತೆ ವಹಿಸಿದ್ದರು.  ಶ್ರೀಕೃಷ್ಣ ಭಟ್ಟರ ಸಾಹಿತ್ಯ ಚಿಂತನೆ ಎಂಬ ವಿಷಯದಲ್ಲಿ ಡಾ.ಪಾದೇಕಲ್ಲು ವಿಷ್ಣುಭಟ್, ಶ್ರೀಕೃಷ್ಣ ಭಟ್ಟರ ಬಹುಭಾμÁ ಚಿಂತನೆ ಎಂಬ ವಿಷಯದಲ್ಲಿ ಡಾ. ಮೋಹನ ಕುಂಟಾರು, ಶ್ರೀಕೃಷ್ಣ ಭಟ್ಟರ ವ್ಯಾಕರಣಚಿಂತನೆ ಎಂಬ ವಿಷಯದಲ್ಲಿ ಎಸ್. ಕಾರ್ತಿಕ್ ಬೆಂಗಳೂರು ಅವರು ವಿಷಯ ಮಂಡಿಸಿದರು. 

ಅಪರಾಹ್ನ ಹಂಪಿ ವಿ.ವಿ. ವಿಶ್ರಾಂತ ಕುಲಸಚಿವ ಡಾ. ಎ.ಸುಬ್ಬಣ್ಣ ರೈ ಅವರಿಂದ ಹಳೆಗನ್ನಡ ಮತ್ತು ನಡುಗನ್ನಡ ಕಾವ್ಯಭಾಗಗಳ ವಾZನಕಾರ್ಯಕ್ರಮ 'ಕಾವ್ಯವಿಹಾರ' ಜರುಗಿತು. ಬಳಿಕ ವಿಶ್ರಾಂತ ಪ್ರಾಂಶುಪಾಲ ಪೆÇ್ರ.ಪಿ.ನ್.ಮೂಡಿತ್ತಾಯ ಅವರ ಅಧ್ಯಕ್ಷತೆಯಲ್ಲಿ ಅಭಿನಂದನಾ ಕಾರ್ಯಕ್ರಮ ಜರಗಿತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries