ಬದಿಯಡ್ಕ: ಪೂನಾದ ಹವಾಮಾನ ಸಂಶೋಧನೆ ಮತ್ತು ಸೇವಾ ಸಂಸ್ಥೆಯ ಯುವ ವಿಜ್ಞಾನಿ ಮೂಲತಃ ಕಾಸರಗೋಡು ಬೇಳ ಸಮೀಪದ ದರ್ಭೆತ್ತಡ್ಕದ ಅಶ್ವಿನ್ ರಾಜು ಡಿ.ಕೆ. ಮತ್ತು ಅವರ ತಂಡವನ್ನು ಕೇಂದ್ರ ಹವಾಮಾನ ವಿಜ್ಞಾನ ಇಲಾಖೆ ಅಭಿನಂದಿಸಿದೆ. ಕಳೆದ ಅಕ್ಟೋಬರ್ ನಲ್ಲಿ ಸಂಭವಿಸಿದ 'ದಾನಾ' ಬಿರುಗಾಳಿಯ ವೇಗ ಮತ್ತು ಭೂಮಿಗೆ ಅಪ್ಪಳಿಸುವ ಸ್ಥಳವನ್ನು ತಿಳಿಯಲು ಸಜ್ಜೀಕರಿಸಿದ ತಂತ್ರಜ್ಞಾನ ಕ್ಕೆ ಈ ಅಭಿನಂದನೆ ಸಂದಿದೆ. ಅಭಿನಂದನಾ ಪತ್ರವನ್ನು ಪೂನಾದ ಹವಾಮಾನ ಸಂಶೋಧನೆ ಮತ್ತು ಸೇವಾಸಂಸ್ಥೆಯ ಹಿರಿಯ ವಿಜ್ಞಾನಿ ಕೆ ಎಸ್ ಹೊಸಲಿಕರ್ ಇತ್ತೀಚೆಗೆ ಹಸ್ತಾಂತರಿಸಿದರು.