ಕುಂಬಳೆ: ಕಾಸರಗೋಡು ಜಿಲ್ಲಾ ಕುಲಾಲ ಸಂಘ ಕುಂಬಳೆ ಪಂಚಾಯತಿ ಸಮಿತಿಯ ವತಿಯಿಂದ ದಿ.ನಾರಾಯಣ ಮಾಸ್ತರ್ ಕಮಾರ್ತೆ ಸಂಸ್ಮರಣಾ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇತ್ತೀಚೆಗೆ ಕಳತ್ತೂರಿನಲ್ಲಿ ಜರಗಿತು.
ಗಂಗಾಧರ ಕೆ ಟಿ ಅಧ್ಯಕ್ಷತೆ ವಹಿಸಿದ್ದರು .ಕುಲಶೇಖರ ವೀರನಾರಾಯಣ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರೇಮಾನಂದ ಕುಲಾಲ ಕೋಡಿಕಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಈ ರೀತಿಯ ಅರ್ಥಪೂರ್ಣ ಕಾರ್ಯಕ್ರಮದ ಮುಖೇನ ಸಮಾಜ ಬಾಂಧವರನ್ನು ಒಗ್ಗೂಡಿಸಿ ನಮ್ಮ ಸಮಾಜವನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಸಾಧ್ಯ ಎಂದು ಶುಭ ಹಾರೈಸಿದರು.
ಸಭೆಯಲ್ಲಿ ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಇತಿಹಾಸದಲ್ಲಿ ಪ್ರಪ್ರಥಮವಾಗಿ ದಿ.ನಾರಾಯಣ ಮಾಸ್ತರ್ ಸ್ಮಾರಕ ಕುಲಾಲ ತಿಲಕ ಪ್ರಶಸ್ತಿಯನ್ನು ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದು ಡಾಕ್ಟರೇಟ್ ಪ್ರಶಸ್ತಿ ವಿಜೇತೆ ಡಾಎಸ್ ವೇದಾವತಿ ಮಧೂರು ಅವರಿಗೆ ನೀಡಲಾಯಿತು. ಮುಖ್ಯ ಅತಿಥಿಗಳಾಗಿ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್, ಗೀತಾ ಮನೋಜ್ ಮರೊಳಿ ಹಾಗೂ ಬಾಲಕೃಷ್ಣ ದೀಕ್ಷಾ ಕುಂಜತ್ತೂರು ಉಪಸ್ಥಿತರಿದ್ದರು. ಭಾರತಿ ಉಳಕರೆ, ಸುಂದರಿ ಕಮಾರ್ತೆ , ದಯಾನಂದ ಮುಜಂಗಾವು, ಯು.ಎಂ. ಮೂಲ್ಯ ಕಿದೂರು ಉಪಸ್ಥಿತರಿದ್ದರು. ನಾರಾಯಣ ಕಳತ್ತೂರು ಸ್ವಾಗತಿಸಿ, ಅಶೋಕ ಪುಣಿಯೂರು ವಂದಿಸಿದರು. ಕೃಷ್ಣ ಕಳತ್ತೂರು ಕಾರ್ಯಕ್ರಮ ನಿರೂಪಿಸಿದರು.
ಮಧ್ಯಾಹ್ನ ಭೋಜನದ ಬಳಿಕ ಕುಲಾಲ ಪ್ರತಿಭೆಗಳಿಂದ ಕುಲಾಲ ಕುಸಲ್ ಸಾಂಸ್ಕøತಿಕ ಸಂಜೆ ಕಾರ್ಯಕ್ರಮ ಜರಗಿತು.