ಲಾಹೋರ್: ಫೇಸ್‌ಬುಕ್‌ನಲ್ಲಿ ಧರ್ಮನಿಂದನೆಯ ವಿಷಯವಸ್ತು ಹಂಚಿಕೊಂಡಿದ್ದಕ್ಕಾಗಿ ನಾಲ್ವರಿಗೆ ಲಾಹೋರ್‌ನ ಸೆಷನ್ಸ್ ನ್ಯಾಯಾಲಯವು ಮರಣ ದಂಡನೆ ಮತ್ತು 80 ವರ್ಷ ಜೈಲು ಶಿಕ್ಷೆ ವಿಧಿಸಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದರು.
ಈ ನಾಲ್ವರು, ಫೇಸ್‌ಬುಕ್‌ನ ಬೇರೆ ಬೇರೆ ಖಾತೆಗಳಿಂದ ಧರ್ಮನಿಂದನೆ ವಿಷಯವನ್ನು ಹಂಚಿಕೊಂಡಿದ್ದಾರೆ ಎಂದು ನ್ಯಾಯಾಲಯದ ಅಧಿಕಾರಿ ತಿಳಿಸಿದ್ದಾರೆ.
ಆರೋಪಿಗಳಾದ ವಾಜಿದ್ ಅಲಿ, ಅಹ್ಫಾಕ್ ಅಲಿ ಸಾಕಿಬ್, ರಾಣಾ ಉಸ್ಮಾನ್ ಮತ್ತು ಸುಲೇಮಾನ್ ಸಾಜಿದ್ ಅವರಿಗೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಮೊಹಮ್ಮದ್ ತಾರಿಕ್ ಅಯೂಬ್ ಅವರು ಶುಕ್ರವಾರ ಶಿಕ್ಷೆ ವಿಧಿಸಿದ್ದಾರೆ.