HEALTH TIPS

ಯಾವುದೇ ಕಾರಣವಿರಲ್ಲ, ಆದರೂ ಮನಸ್ಸಿಗೆ ಬೇಸರ, ಅಳು ಬರುತ್ತದೆ, ಏಕೆ?

ಕೆಲವೊಮ್ಮೆ ಯಾವುದೇ ಕಾರಣವಿಲ್ಲದೆ ಮನಸ್ಸಿಗೆ ಬೇಸರವಾಗುತ್ತದೆ, ಏಕೆ ಬೇಸರವಾಗುತ್ತದೆ ಎಂಬುವುದಕ್ಕೆ ಕಾರಣವಿರಲ್ಲ, ಆದರೂ ಮನಸ್ಸಿಗೆ ನೋವಾಗುತ್ತದೆ. ಏಕೆ ಈ ರೀತಿಯಾಗುತ್ತದೆ, ನಮಗೆ ನೋವಾಗುವ ಯಾವ ಸಂಗತಿಯೂ ನಡೆದಿರುವುದಿಲ್ಲ, ಆದರೂ ಮನಸ್ಸಿಗೆ ನೋವುಂಟಾಗುವುದು, ನಮ್ಮಲ್ಲಿ ಏಕೆ ಈ ರೀತಿಯ ಬೇಸರದ ಭಾವನೆ ಉಂಟಾಗುತ್ತದೆ ಎಂದು ನೋಡೋಣ:

ಹಾರ್ಮೋನ್‌ಗಳ ಬದಲಾವಣೆ
ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ಈ ರೀತಿ ಆಗುವುದುಂಟು, ಹಾರ್ಮೋನ್‌ಗಳ ಬದಲಾವಣೆಯಿಂದಾಗಿ ಈ ರೀತಿ ಉಂಟಾಗುವುದು, ಈಸ್ಟ್ರೋಜನ್‌, ಪ್ರೊಜೆಸ್ಟೊರೋನೆ ಹಾರ್ಮೋನ್‌ನಲ್ಲಿ ಬದಲಾವಣೆಯಾದಾಗ ಈ ರೀತಿಯಾಗುವುದು. ಅಲ್ಲದೆ ಮೆನೋಪಾಸ್‌ ಸಂದರ್ಭದಲ್ಲಿ ಈ ರೀತಿ ಉಂಟಾಗುವುದು, ಇವೆಲ್ಲಾ ಹಾರ್ಮೋನ್‌ಗ ಬದಲಾವಣೆಯಿಂದ ಉಂಟಾಗುವುದು.

ಹಾರ್ಮೋನ್‌ಗಳ ಬದಲಾವಣೆಯಾದಾಗ
ಕಾರಣವಿಲ್ಲದೆ ಅಳುವುದು
ಹಸಿವು ಇಲ್ಲದಿರುವುದು
ನಿದ್ರಾಹೀನತೆ
ಮೂಡ್‌ಸ್ವಿಂಗ್‌
ನಿರಾಸೆ
ಸುಮ್ಮನೆ ಕೋಪಪಡುವುದು ಈ ಬಗೆಯ ಸಮಸ್ಯೆ ಉಂಟಾಗುವುದು.

ನಿದ್ದೆ ಕಡಿಮೆಯಾದಾಗಲೂ ಈ ಬಗೆಯ ಸಮಸ್ಯೆ ಉಂಟಾಗುವುದು

ಆಗಾಗ ನಿದ್ದೆಯಿಂದ ಏಳುವುದು
ವಿಶ್ರಾಂತಿ ಇಲ್ಲದಿರುವುದು
ಏಕಾಗ್ರತೆ ಕಡಿಮೆ ಇರುವುದು
ಹಗಲಿನಲ್ಲಿ ತೂಕಡಿಕೆ

ಇವೆಲ್ಲಾ ನಮ್ಮ ಮಾನಸಿಕ ಆರೋಗ್ಯದ ಮೇಲೆ ತುಂಬಾನೇ ಪರಿಣಾಮ ಬೀರುವುದು, ಹಾಗಾಗಿ ಆರೋಗ್ಯಕ್ಕಾಗಿ ದಿನದಲ್ಲಿ 8 ಗಂಟೆ ನಿದ್ದೆ ಕಡೆಗೆಗಮನಹರಿಸಬೇಕು.

ಮಾನಸಿಕ ಒತ್ತಡ
ಅತಿಯಾದ ಮಾನಸಿಕ ಒತ್ತಡ ನಮ್ಮ ಶರೀರದಲ್ಲಿ ಹಲವು ಬದಲಾವಣೆಯನ್ನು ಉಂಟು ಮಾಡುತ್ತದೆ.
ತಲೆನೋವು
ಆರೋಗ್ಯ ಸಮಸ್ಯೆ
ಹತಾಶೆ
ಇವೆಲ್ಲಾ ಕೂಡ ಕಾರಣವಿಲ್ಲದೆ ಸಮಸ್ಯೆಯನ್ನುಂಟು ಮಾಡುತ್ತದೆ. ಜೀವನದ ಮೇಲೆ ನಕರಾತ್ಮಕ ಆಲೋಚನೆ ಬರುವಂತೆ ಮಾಡುತ್ತದೆ. ಇದರಿಂದಾಗಿ ಕೂಡ ಅಳು ಬರುವುದು.

ಕೆಲವೊಂದು ಆರೋಗ್ಯ ಸಮಸ್ಯೆ
ಖಿನ್ನತೆ
ಬೈಪೋಲಾರ್‌ ಕಾಯಿಲೆ
ಅತಿಯಾದ ಮಾನಸಿಕ ಒತ್ತಡ

ಈ ಬಗೆಯ ಸಮಸ್ಯೆ ನಿರ್ಲಕ್ಷ್ಯ ಮಾಡಬಾರದು, ಇಂಥ ಲಕ್ಷಣಗಳು ಕಂಡು ಬಂದರೆ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆದರೆ ಮಾತ್ರ ಗುಣಮುಖರಾಗಬಹುದು, ನಿರ್ಲಕ್ಷ್ಯ ಪ್ರಾಣಕ್ಕೆ ಅಪಾಯ ತರಬಹುದು.

ಈ ರೀತಿ ಕಾರಣವಿಲ್ಲದೆ ಬೇಸರವಾಗುವುದು ಸಾಮಾನ್ಯವೇ?
ಎಲ್ಲರಿಗೂ ಈ ಅನುಭವವಾಗಿರುತ್ತದೆ, ಕಾರಣವಿಲ್ಲದೆ ಮನಸ್ಸಿಗೆ ಬೇಸರವಾಗುತ್ತದೆ, ಸುಮ್ಮನೆ ಬೇಸರವಾಗುತ್ತೆ, ಕಾರಣವಿಲ್ಲದೆ ಅಳು ಬರಬಹುದು, ಆದರೆ ಈ ರೀತಿ ಪದೇಪದೇ ಆಗುತ್ತಿದೆ ಎಂದರೆ ಅದನ್ನು ನಿರ್ಲಕ್ಷ್ಯ ಮಾಡಬಾರದು.

ಯಾವ ಲಕ್ಷಣಗಳು ಅಪಾಯಕಾರಿ:
ಕಾರಣವಿಲ್ಲದೆ ಬೇಸರವಾಗುವುದು, ಅಳು ಇವೆಲ್ಲಾ ಕೆಲವು ದಿನಗಳಿಂದ ಇದ್ದರೆ
ಈ ಜೀವನ ಸಾಕು ಎಂಬ ಆಲೋಚನೆ ಬಂದರೆ
ದಿನನಿತ್ಯದ ಕೆಲಸ ಕಾರ್ಯಗಳತ್ತ ಗಮನಹರಿಸಲು ಕಷ್ಟವಾಗುವುದು
ಬೇಗನೆ ಕೋಪ ಬರುವುದು

ಈ ಬಗೆಯ ಲಕ್ಣಣಗಳು ಕಂಡು ಬಂದಾಗ ನಿರ್ಲಕ್ಷ್ಯ ಮಾಡಬಾರದು. ಇವೆಲ್ಲಾ ಖಿನ್ನತೆಯ ಲಕ್ಷಣವಾಗಿದೆ, ಹಾಗಾಗಿ ಇದರಿಂದ ಹೊರಬರಲು ವೈದ್ಯರ ಸಲಹೆ ಹಾಗೂ ಜೀವನಶೈಲಿ ಸಹಾಯ ಮಾಡುತ್ತದೆ.

ಈ ರೀತಿಯ ಸಮಸ್ಯೆಯಿಂದ ಹೊರಬರುವುದು ಹೇಗೆ?

ಪ್ರತಿನಿತ್ಯ ವ್ಯಾಯಾಮ ಮಾಡುವುದು, ದೈಹಿಕವಾಗಿ ಚಟುವಟಿಕೆಯಿಂದ ಇರುವುದು ನಕರಾತ್ಮಕ ಆಲೋಚನೆಗಳನ್ನು ದೂರವಿಡುತ್ತದೆ
ಧ್ಯಾನ, ಯೋಗ
ಆರೋಗ್ಯಕರ ಆಹಾರಕ್ರಮದ ಕಡೆಗೆ ಗಮನಹರಿಸುವುದು
ನಿಮ್ಮ ಗುರಿಗಳತ್ತ ಗಮನಹರಿಸುವುದು
ನಿಮ್ಮ ಆತ್ಮೀಯರ ಜೊತೆಗೆ ಬೆರೆಯುವುದು
ಸೂರ್ಯ ಬೆಳಕು ಮೈ ಮೇಲೆ ಬೀಳುವಂತೆ ನೋಡಿಕೊಳ್ಳುವುದು
ಎಕ್ಸ್‌ಪರ್ಟ್‌ಗಳ ಸಲಹೆ ಪಡೆಯುವುದು ( ಮನಶಾಸ್ತ್ರಜ್ಞರು ಈ ನಿಟ್ಟಿನಲ್ಲಿ ನಿಮಗೆ ಸಹಾಯ ಮಾಡುತ್ತಾರೆ)
ಸರಿಯಾದ ಸಮಯಕ್ಕೆ ನಿದ್ದೆ ಮಾಡಿ

ನಿಮಗೆ ನೀವೇ ಅಪಾಯ ತಂದುಕೊಳ್ಳುವ ಆಲೋಚನೆ ಬರ್ತಾ ಇದ್ದರೆ ಈ ಬಗೆಯ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು, ಕೆಲವರು ಮನಶಾಸ್ತ್ರಜ್ಞರ ಭೇಟಿಯಾದರೆ ನನಗೆ ಹುಚ್ಚು ಅಂತಾರೆ ಅಂತ ಹಿಂದೇಟು ಹಾಕುತ್ತಾರೆ, ಇದು ತಪ್ಪು ಕಲ್ಪನೆ, ಅವರನ್ನು ಭೇಟಿಯಾಗುವುದರಿಂದ ನಿಮ್ಮನ್ನು ಕಾಡುತ್ತಿರುವ ಅನಗ್ಯತ ಭಯ, ಬೇಸರ ಇವೆಲ್ಲಾ ದೂರ ಮಾಡಲು ಸಹಾಯವಾಗುತ್ತದೆ, ನೀವು ಸಂತೋಷದ, ಸಹಜ ಜೀವನ ನಡೆಸುವಂತಾಗುವುದು.

ಹಾಗಾಗಿ ಮನಸ್ಸಿಗೆ ತುಂಬಾ ಬೇಸರವಾಗುತ್ತಿದೆ, ಕಾರಣವಿಲ್ಲದೆ ಅಳು ಬರುತ್ತದೆ, ಬೇಗನೆ ಕೋಪ ಬರುತ್ತದೆ, ನಕರಾತ್ಮಕ ಆಲೋಚನೆ ಬರುತ್ತದೆ ಎಂದಾದರೆ ನಿರ್ಲಕ್ಷ್ಯ ಬೇಡ, ಸೂಕ್ತ ತಜ್ಞರನ್ನು ಭೇಟಿಯಾಗಿ, ಈ ಸಮಸ್ಯೆಯಿಂದ ಹೊರಬರಲು ಅವರು ನಿಮಗೆ ಸಹಾಯ ಮಾಡುತ್ತಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries