ಕೀವ್: ರಷ್ಯಾವು ಬುಧವಾರ ಉಕ್ರೇನ್ ಇಂಧನ ಮೂಲಸೌಕರ್ಯವನ್ನು ಗುರಿಯಾಗಿಟ್ಟುಕೊಂಡು ಕ್ಷಿಪಣಿ ದಾಳಿ ನಡೆಸಿದ್ದು, ಈ ಕಾರಣದಿಂದಾಗಿ ವಿದ್ಯುತ್ ಪ್ರಸರಣವನ್ನು ಸ್ಥಗಿತಗೊಳಿಸಲಾಗಿದೆ ಎಂದು ಉಕ್ರೇನ್ ಇಂಧನ ಸಚಿವ ಹರ್ಮನ್ ಹಲುಶ್ಚೆಂಕೊ ತಿಳಿಸಿದ್ದಾರೆ.
'ಶತ್ರುಗಳು ಉಕ್ರೇನಿಯನ್ನರನ್ನು ಬೆದರಿಸಲು ಮುಂದಾಗಿದ್ದಾರೆ' ಎಂದು ಹಲುಶ್ಚೆಂಕೊ ಫೇಸ್‌ಬುಕ್‌ನಲ್ಲಿ ಬರೆದಿದ್ದು, ಮನೆಯೊಳಗೇ ಸುರಕ್ಷಿತವಾಗಿ ಇರಬೇಕು ಹಾಗೂ ಅಧಿಕೃತ ಸಲಹೆ-ಸೂಚನೆಗಳನ್ನು ಪಾಲಿಸಬೇಕು ಎಂದು ಉಕ್ರೇನಿಯನ್ನರಿಗೆ ಹೇಳಿದ್ದಾರೆ.
ಉಕ್ರೇನ್ ವಾಯುಪಡೆಯು ರಷ್ಯಾದ ಹಲವು ಕ್ಷಿಪಣಿಗಳನ್ನು ಪತ್ತೆ ಮಾಡಿದ್ದು, ಯಾವುದೇ ಪ್ರಾಣಹಾನಿ ಮತ್ತು ನಷ್ಟದ ಕುರಿತು ವರದಿ ಮಾಡಿಲ್ಲ.