ಚೆನ್ನೈ: 'ಶತಮಾನದಿಂದ 'ಕಗ್ಗಂಟಾಗಿ' ಉಳಿದಿರುವ ಸಿಂಧೂ ಕಣಿವೆ ನಾಗರಿಕತೆಯ ಹಸ್ತಪ್ರತಿ ರಹಸ್ಯ ಭೇದಿಸಿದವರಿಗೆ 1 ಮಿಲಿಯನ್ ಡಾಲರ್ (ಅಂದಾಜು ₹ 8.57 ಕೋಟಿ) ಬಹುಮಾನ ನೀಡಲಾಗುವುದು' ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಪ್ರಕಟಿಸಿದರು.
ಸಿಂಧೂ ನಾಗರಿಕತೆಯ ಅನ್ವೇಷಣೆಯ ಶತಮಾನೋತ್ಸವ ಕುರಿತ 3 ದಿನದ ಅಂತರರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿದ ಅವರು, 'ಈಗಲೂ ಆ ಹಸ್ತಪ್ರತಿಯನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ನಮಗೆ ಸಾಧ್ಯವಾಗಿಲ್ಲ' ಎಂದು ಅವರು ಅಭಿಪ್ರಾಯಪಟ್ಟರು.
ಈ ನಿಟ್ಟಿನಲ್ಲಿ ಸಂಶೋಧಕರ ಪ್ರಯತ್ನಗಳಿಗೆ ಉತ್ತೇಜನ ನೀಡಲಿದ್ದು, ಹಸ್ತಪ್ರತಿಯ ರಹಸ್ಯ ಭೇದಿಸುವ ವ್ಯಕ್ತಿ ಅಥವಾ ಸಂಸ್ಥೆಗೆ ಈ ಬಹುಮಾನ ನೀಡಲಾಗುತ್ತದೆ ಎಂದು ಹೇಳಿದರು.