HEALTH TIPS

ಭಾರತ ಚುನಾವಣೆ ಬಗ್ಗೆ ಜುಕರ್‌ಬರ್ಗ್ ಹೇಳಿಕೆ: ಮೆಟಾ ಇಂಡಿಯಾ ಕ್ಷಮೆ

ನವದೆಹಲಿ: 2024ರ ಚುನಾವಣೆಯಲ್ಲಿ ಆಡಳಿತರೂಢ ಸರ್ಕಾರ ಸೋಲನುಭವಿಸಿದೆ ಎಂದು ಪಾಡ್‌ಕಾಸ್ಟ್ ಒಂದರಲ್ಲಿ ಹೇಳಿದ್ದ ಸಿಇಒ ಮಾರ್ಕ್ ಜುಕರ್‌ಬರ್ಗ್ ಹೇಳಿಕೆಗೆ ಮೆಟಾ ಇಂಡಿಯಾ ಕ್ಷಮೆ ಕೇಳಿದೆ. ಇದು ಉದ್ದೇಶಪೂರ್ಕವಾಗಿ ಹೇಳಿದ್ದಲ್ಲ ಎಂದು ಹೇಳಿದೆ.

ಕಾರ್ಯಕ್ಷಮತೆ ಆಧರಿಸಿ ಕ್ರಮ | 3,600 ಉದ್ಯೋಗಿಗಳನ್ನು ಕಡಿತಗೊಳಿಸಲು ಮುಂದಾದ ಮೆಟಾ!

ಈ ಬಗ್ಗೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಮೆಟಾ ಇಂಡಿಯಾದ ಉಪಾಧ್ಯಕ್ಷ ಶಿವನಾಥ್ ಥುರ್ಕಲ್‌, 'ಅಶ್ವಿನಿ ವೈಷ್ಣವ್ ಅವರೇ, 2024ರ ಚುನಾವಣೆಯಲ್ಲಿ ಆಡಳಿತರೂಢ ಪಕ್ಷಗಳು ಗೆಲುವು ಸಾಧಿಸಿಲ್ಲ ಎನ್ನುವ ಮಾರ್ಕ್ ಅವರ ಹೇಳಿಕೆಯು ಹಲವು ದೇಶಗಳಲ್ಲಿ ನಿಜ. ಆದರೆ ಭಾರತದಲ್ಲಲ್ಲ' ಎಂದು ಹೇಳಿದ್ದಾರೆ.

'ಉದ್ದೇಶಪೂರ್ವಕವಲ್ಲದ ಈ ತಪ್ಪಿಗೆ ನಾವು ಕ್ಷಮೆಯಾಚಿಸುತ್ತೇವೆ. ಮೆಟಾಗೆ ಭಾರತ ಯಾವಾಗಲೂ ಅತ್ಯಂತ ಪ್ರಮುಖ ದೇಶ. ನಾವು ಅದರ ಭವಿಷ್ಯದ ನಾವಿನ್ಯತೆಯ ಭಾಗವಾಗಿರಲು ಬಯಸುತ್ತೇವೆ' ಎಂದು ಬರೆದುಕೊಂಡಿದ್ದಾರೆ.

ಈ ಹಿಂದೆ ಕೇಂದ್ರ ಮಾಹಿತಿ, ಪ್ರಸಾರ ಹಾಗೂ ಐಟಿ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು, ಜೋ ರೋಗನ್‌ ಪಾಡ್‌ಕಾಸ್ಟ್‌ನಲ್ಲಿ ಜುಕರ್‌ಬರ್ಗ್ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ ವಾಗ್ದಾಳಿ ನಡೆಸಿದ್ದರು. '2024 ರ ಚುನಾವಣೆಗಳಲ್ಲಿ ಭಾರತ ಸೇರಿದಂತೆ ಅಧಿಕಾರದಲ್ಲಿರುವ ಹೆಚ್ಚಿನ ಸರ್ಕಾರಗಳು ಕೋವಿಡ್ ನಂತರ ಸೋತಿವೆ ಎನ್ನುವ ಜುಕರ್‌ಬರ್ಗ್ ಹೇಳಿಕೆಯು ವಾಸ್ತವಿಕವಾಗಿಲ್ಲ' ಎಂದು ಹೇಳಿದ್ದರು.

ಅಲ್ಲದೆ ಜುಕರ್‌ಬರ್ಗ್ ಅವರ ಹೇಳಿಕೆಯು ತಪ್ಪು ಮಾಹಿತಿಯಾಗಿದ್ದು, ಮೆಟಾ ತನ್ನ ವಿಶ್ವಾಸಾರ್ಹತೆಯನ್ನು ಎತ್ತಿ ಹಿಡಿಯಬೇಕು ಎಂದು ಆಗ್ರಹಿಸಿದ್ದರು.

ಅಲ್ಲದೆ, ಈ ಬಗ್ಗೆ ಮೆಟಾಗೆ ನೋಟಿಸ್ ನೀಡುವುದಾಗಿ ಸಂಸತ್ತಿನ ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸ್ಥಾಯಿ ಸಮಿತಿಯ ಅಧ್ಯಕ್ಷರೂ ಬಿಜೆಪಿ ಸಂಸದರೂ ಆದ ನಿಶಿಕಾಂತ್ ದುಬೆ ಹೇಳಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries