HEALTH TIPS

ಮಂಜೇಶ್ವರಕ್ಕೆ ವರದಾನವಾದ ಕುಂಡುಕೊಳಕೆ ಗ್ರ್ಯಾಂಡ್ ಬೀಚ್ ಉತ್ಸವಕ್ಕೆ ಚಾಲನೆ

ಮಂಜೇಶ್ವರ : ಮಂಜೇಶ್ವರದ ಜನತೆಗೆ ವರದಾನವಾಗಿರುವ ಎ ಎಚ್ ಎಸ್ ತಂಡ ಆಯೋಜಿಸುತ್ತಿರುವ ಬೀಚ್ ಉತ್ಸವ 24 - 25 ಈ ವರ್ಷವೂ ಕುಂಡುಕೊಳಕೆ ಕಡಲ ಕಿನಾರೆಯಲ್ಲಿ ವಿಶಿಷ್ಟವಾದ ಅನುಭವಗಳನ್ನು ನೀಡಲು ಸಿದ್ಧವಾಗಿದೆ. ಉಚಿತ ಪ್ರವೇಶದೊಂದಿಗೆ ಆಯೋಜಿಸಲಾದ ಈ ಗ್ರ್ಯಾಂಡ್ ಬೀಚ್ ಉತ್ಸವವು  ಮನರಂಜನೆಯನ್ನು ನೀಡುವುದರ ಜೊತೆಯಾಗಿ ಸ್ಥಳೀಯ ಪ್ರತಿಭೆಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಅವಕಾಶವನ್ನು ಕೂಡಾ ಕಲ್ಪಿಸಿದೆ. 

ಬೀಚ್ ಉತ್ಸವದಲ್ಲಿ ಪಾಲ್ಗೊಳ್ಳುವವರಿಗೆ ಕ್ವಿಜ್ ಕಾರ್ಯಕ್ರಮ ಕೂಡಾ ಆಯೋಜಿಸಲಾಗಿದ್ದು ವಿಜೇತರಾದವರಿಗೆ ವಿವಿಧ ರೀತಿಯ ಬಹುಮಾನಗಳನ್ನು ಕೂಡಾ ನೀಡಲು  ಮುಂದಾಗಿರುವುದು ಇಲ್ಲಿಯ ವಿಶೇಷತೆಯಾಗಿದೆ.

ಇದೀಗ ಬೀಚ್ ಉತ್ಸವದ ಮನರಂಜನೆ ಕೇವಲ ಮಕ್ಕಳಿಗೆ ಮಾತ್ರ ಸೀಮಿತವಾಗಿರದೆ ಹಿರಿಯರಿಗೂ ಹಲವು ರೀತಿಯ  ಸಾಂಸ್ಕøತಿಕ ನೃತ್ಯ, ಹಾಡುಗಳು ಮತ್ತು ಅನೇಕ ಹರ್ಷಭರಿತ ಚಟುವಟಿಕೆಗಳಿಂದ ಇಲ್ಲಿಗೆ ಆಗಮಿಸುವ ವೀಕ್ಷಕರನ್ನು ಆಕರ್ಷಿಸುತ್ತಿದೆ.

ಈಗಾಗಲೇ ಕಾಸರಗೋಡು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನ ಮೆಚ್ಚುಗೆಯನ್ನು ಪಡೆದಿರುವ ಉದ್ಯಾವರ ಎ ಎಚ್ ಎಸ್ ತಂಡ ಮಂಜೇಶ್ವರ ಕುಂಡುಕೊಳಕೆ ಬೀಚ್ ನಲ್ಲಿ ಆರಂಭಿಸಿರುವ ವೈವಿಧ್ಯಮಯವಾದ ಮನರಂಜನೆಯನ್ನೊಳಗೊಂಡ ಬೀಚ್ ಉತ್ಸವಕ್ಕೆ ಸೋಮವಾರ ಅದ್ದೂರಿಯ ಚಾಲನೆ ನೀಡಲಾಯಿತು.  ಮಂಜೇಶ್ವರದ  ಶಾಸಕ ಎಕೆಎಂ ಅಶ್ರಫ್ ರಿಬ್ಬನ್ ಕತ್ತರಿಸಿ 2024 - 25ರ ಮಂಜೇಶ್ವರ ಬೀಚ್ ಉತ್ಸವವಕ್ಕೆ ಚಾಲನೆ ನೀಡಿದರು

ಬಳಿಕ ಮಾತನಾಡಿದ ಅವರು  ದೊಡ್ಡ ದೊಡ್ಡ ನಗರಗಳಲ್ಲಿ ಲಭ್ಯವಾಗುವ ವಿವಿಧ ಮನರಂಜನೆಗಳು ಇದೀಗ ಗ್ರಾಮೀಣ ಪ್ರದೇಶದ ಮನೋಹರವಾದ ಕಡಲ ತೀರದಲ್ಲಿ ತಲೆ ಎತ್ತಿದೆ.  ನಮಗೆ ವರದಾನವಾಗಿರುವ ಈ ಉತ್ಸವವದ ಪ್ರಯೋಜನವನ್ನು ಎಲ್ಲರೂ ಪಡಕೊಳ್ಳುವಂತೆ ವಿನಂತಿಸಿಕೊಂಡು ಬೀಚ್ ಉತ್ಸವವನ್ನು ಮಂಜೇಶ್ವರದಲ್ಲಿ ಆಯೋಜಿಸಿದವರಿಗೆ ಅಭಿನಂದನೆ ಸಲ್ಲಿಸಿದರು.

ಮಂಜೇಶ್ವರದ ಜನತೆ ಇನ್ನು ಬೀಚ್ ಉತ್ಸವ ನೋಡಲು ದೂರದ ಊರಿಗೆ ಹೋಗಬೇಕಾದ ಅವಶ್ಯಕತೆ ಇಲ್ಲ. ಉತ್ಸವವನ್ನು ಉತ್ಸಾಹ ಭರಿತರಾಗಿ ವೀಕ್ಷಿಸಿ ಆನಂದಿಸಲು ಗ್ರಾಮೀಣ ಪ್ರದೇಶದಲ್ಲಿಯೇ ಎ ಎಚ್ ಎಸ್ ತಂಡ ವ್ಯವಸ್ಥೆ ಕಲ್ಪಿಸಿದೆ. ಜನವರಿ 26 ರಂದು ಬೀಚ್ ಉತ್ಸವ ಸಮಾಪ್ತಿಗೊಳ್ಳಲಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries