ಕಾಸರಗೋಡು: ಐಸಿಎಆರ್-ಸಿಪಿಸಿಆರ್‍ಐ 109 ನೇ ಸಂಸ್ಥಾಪನಾ ದಿನಾಚರಣೆ ಜ. 3ರಿಂದ 5ರ ವರೆಗೆ ಕಾಸರಗೋಡಿನ ಐಸಿಎಆರ್-ಸಿಪಿಸಿಆರ್‍ಐ ಕ್ಯಾಂಪಸ್‍ನಲ್ಲಿ ಜರುಗಲಿದೆ. ಈ ಸಂದರ್ಭ 'ಸುಸ್ಥಿರ ಅಭಿವೃದ್ಧಿ ಗುರಿಗಾಗಿ ತೋಟಗಾರಿಕಾ ವಲಯವನ್ನು ಬಳಸಿಕೊಲ್ಳುವುದು'ವಿಷಯದಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ಕೃಷ್ಯುತ್ಪನ್ನಗಳ ಪ್ರದರ್ಶನ ನಡೆಯಲಿದೆ.
ಜ. 3ರಂದು ಬೆಳಗ್ಗೆ 10ಕ್ಕೆ ಐಸಿಎಆರ್ ಮಹಾನಿರ್ದೇಶಕ ಮತ್ತು ಡಿಎಆರ್‍ಇ ಕಾರ್ಯದರ್ಶಿ ಡಾ ಹಿಮಾಂಶು ಪಾಠಕ್ ಸಮಾರಂಭ ಉದ್ಘಾಟಿಸುವರು. ಇದಕ್ಕೂ ಮೊದಲು ಕ್ಯಾಂಪಸ್‍ನೊಳಗೆ ನೂತನವಾಗಿ ನಿರ್ಮಿಸಲಿರುವ ಕೆ.ವಿ.ಕೆ ನೂತನ ಕಟ್ಟಡಕ್ಕೆ ಶಿಲಾನ್ಯಾಸ, ಮಲ್ಟಿ ಯೂಟಿಲಿಟಿ ಹಬ್, ಭಾರತರತ್ನ ಎಂ.ಎಸ್ ಸ್ವಾಮಿನಾಥನ್ ಸಮಿತಿ ಕೊಠಡಿ ಉದ್ಘಾಟನೆ, ಸೋಲಾರ್ ಗ್ರಿಡ್‍ನ ಕಮಿಶನಿಂಗ್, ಫೀಲ್ಡ್ ವಿಸಿಟ್ ನಡೆಯಲಿದೆ. ಸಭೆಯಲ್ಲಿ ವಿಜ್ಞಾನಿಗಳು, ವಿದ್ಯಾರ್ಥಿಗಳು, ಕೃಷಿ ಉದ್ಯಮಿಗಳು, ವಿವಿಧ ರಾಜ್ಯಗಳ ಅಭಿವೃದ್ಧಿ ಏಜೆನ್ಸಿಗಳ ಅಧಿಕಾರಿಗಳು, ಎಫ್‍ಪಿಒಗಳು, ರೈತರು ಮತ್ತು ಇತರ ಮಧ್ಯವರ್ತಿಗಳು ಪಾಲ್ಗೊಳ್ಳುವರು.
ಸೆಮಿನಾರ್‍ನಲ್ಲಿ ಕೃಷಿಯಲ್ಲಿನ ವಿವಿಧ ಕ್ಷೇತ್ರಗಳ ಗಣ್ಯ ವ್ಯಕ್ತಿಗಳಿಂದ ಮಾತುಕತೆ, ಪ್ಯಾನಲ್ ಚರ್ಚೆ, ಇಂಟರ್‍ಫೇಸ್, ಮೌಖಿಕ ಮತ್ತು ಪೆÇೀಸ್ಟರ್ ಪ್ರಸ್ತುತಿ, ಕೃಷ್ಯುತ್ಪನ್ನ ಪ್ರದರ್ಶನ, ಕ್ಷೇತ್ರ ಸಂದರ್ಶನ ಮತ್ತು ಯುವ ಸಂಶೋಧಕರಿಗೆ ಪ್ರಶಸ್ತಿ ವಿತರಣೆ ನಡೆಯಲಿದೆ.
ಐಸಿಎಆರ್ ಸಂಸ್ಥೆಗಳು, ಕೆವಿಕೆಗಳು, ಅಭಿವೃದ್ಧಿ ಏಜೆನ್ಸಿಗಳು, ಯಶಸ್ವಿ ಉದ್ಯಮಿಗಳ ಉತ್ಪನ್ನಗಳು, ಸ್ವ-ಸಹಾಯ ಗುಂಪುಗಳಲ್ಲಿ ಲಭ್ಯವಿರುವ ತಂತ್ರಜ್ಞಾನಗಳ ಭವ್ಯ ಪ್ರದರ್ಶನ ಸಾರ್ವಜನಿಕರಿಗಾಗಿ ನಡೆಯಲಿದೆ.