ಕುಂಬಳೆ: ದ್ವಿಚಕ್ರ ವಾಹನದಲ್ಲಿ ಸಂಚರಿಸುವ ವೇಳೆಆಡುಗಳು ಅಡ್ಡಬಂದು ಬಿದ್ದು ಗಾಯಗೊಂಡು ಚಿಕಿತ್ಸೆಪಡೆದ ಗ್ರಾಹಕಗೆ ನಷ್ಟಪರಿಹಾರ ನೀಡುವಂತೆ ಕಾಸರಗೋಡು ಜಿಲ್ಲಾ ಗ್ರಾಹಕರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.
11-08-2020ರಂದು ಸಂಜೆ ಕಳತ್ತೂರಿನಿಂದ ಕಟ್ಟತ್ತಡ್ಕಕ್ಕೆ ದ್ವಿಚಕ್ರ ವಾಹನದಲ್ಲಿ ಸಂಚರಿಸುವಾಗ ಕಪ್ಪು ಆಡುಗಳು ಹಠಾತ್ತನೆ ಅಡಬಂದು ದ್ವಿಚಕ್ರವಾಹನ ಪಲ್ಟಿಯಾಗಿ ಬಿದ್ದು ಕಾಲಿಗೆ ತೀವ್ರ ಗಾಯಗಳಾದ ಸೀತಾಂಗೋಳಿ ನಿವಾಸಿ ಪಾಸ್ಕಲ್ ಡಿಸೋಜ ಅವರಿಗೆ ಬಡ್ಡಿ ಸಹಿತ ಪರಿಹಾರ ನೀಡುವಂತೆ ಯುನಿವರ್ಸಲ್ ಇನ್ಸೂರೆನ್ಸ್ ಕಂಪೆನಿಗೆ ಆದೇಶ ನೀಡಲಾಗಿದೆ.
ದೂರುದಾರರು ಚಿಕಿತ್ಸೆಗಾಗಿ ಖರ್ಚಾದ ಹಣಕ್ಕಾಗಿ ಸಕಲ ದಾಖಲೆಗಳು ಹಾಗೂ ಮುಂದೆ ಕೆಲಸಮಾಡಲು ಅಶಕ್ತರೆಂದು ವೈದ್ಯಾಧಿಕಾರಿಗಳ ಪ್ರಮಾಣಪತ್ರ ಸಹಿತ ವಿಮಾ ಕಂಪೆನಿಗೆ ಹಲವಾರು ಬಾರಿ ಸಮೀಪಿಸಿದರೂ ತಮ್ಮ ಕರ್ತವ್ಯದಿಂದ ನುಣುಚಿಕೊಂಡು ಹಾರಿಕೆಯ ಉತ್ತರ ನೀಡಿದ್ದರು.
ಇದರಿಂದ ನೊಂದ ಪಾಸ್ಕಲ್ ಡಿಸೋಜ ಅವರು ಹ್ರಾಹಕರ ಪರಿಹಾರ ನಿಧಿಗೆ ಸಮೀಪಿಸಿದಾಗ ಗ್ರಾಹಕ ಸಮಸ್ಯೆ ಪರಿಹಾರ ಆಯೋಗಕ್ಕೆ ನೀಡಲು ಬಂದ ಸೂಚನೆಯಂತೆ ಪ್ರಕರಣ ಕೊಂಡೊಯ್ದಿದ್ದು, ನ್ಯಾಯಪೀಠ ಪ್ರಕರಣ ಪರಿಶೀಲಿಸಿ ಸತ್ಯಾಸತ್ಯತೆಯನ್ನು ಮನಗಂಡು ವಿಮಾ ಕಂಪೆನಿಯು ಸಂಪೂರ್ಣ ಚಿಕಿತ್ಸಾ ವೆಚ್ಚ, ಮಾನಸಿಕ ಸಂಕಷ್ಟಕ್ಕೆ ಪರಿಹಾರ ಹಾಗೂ ಮೊಕದ್ದಮೆಯ ಖರ್ಚನ್ನು ನೀಡಲು ತೀರ್ಪು ನೀಡಿದೆ. ವಾದಿಯ ಪರವಾಗಿ ಹಿರಿಯ ವಕೀಲ ಥೋಮಸ್ ಡಿಸೋಜ ವಾದಿಸಿದ್ದರು.