ನವದೆಹಲಿ: ದೇಶದಲ್ಲಿ ರಸ್ತೆ ಅಪಘಾತಗಳಿಂದ ಜೀವ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಕಳೆದ ವರ್ಷ ಶಾಲೆಗಳು ಹಾಗೂ ಕಾಲೇಜು ವಲಯಗಳಲ್ಲಿ 26 ಸಾವಿರಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿವೆ ಎಂದು ಜಾಗತಿಕ ರಸ್ತೆ ಸುರಕ್ಷತಾ ಸಂಸ್ಥೆಯಾದ ಇಂಟರ್‌ನ್ಯಾಷನಲ್ ರೋಡ್ ಫೆಡರೇಷನ್ (ಐಆರ್‌ಎಫ್) ಮಂಗಳವಾರ ಹೇಳಿದೆ.
ಇ-ಡಿಎಆರ್ ವರದಿ (ಎಲೆಕ್ಟ್ರಾನಿಕ್ ಡಿಟೈಲ್ಡ್ ಆಯಕ್ಸಿಡೆಂಟ್ ರಿಪೋರ್ಟ್) ಪ್ರಕಾರ ಕಳೆದ ವರ್ಷ ಸಂಭವಿಸಿದ 5.7 ಲಕ್ಷ ಅಪಘಾತಗಳ ಪೈಕಿ ಶೇ 4.6ರಷ್ಟು ಅಪಘಾತಗಳು ಶಾಲೆ ಮತ್ತು ಕಾಲೇಜು ವಲಯದಲ್ಲಿ ಘಟಿಸಿವೆ ಎಂದು ಐಆರ್‌ಎಫ್ ತಿಳಿಸಿದೆ.
'ಚಾಲಕರ ಅತಿವೇಗದ ಚಾಲನೆಯೇ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ' ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಮಹಾನಿರ್ದೇಶಕ (ರಸ್ತೆ ಅಭಿವೃದ್ಧಿ) ಡಿ. ಸಾರಂಗಿ ಹೇಳಿದ್ದಾರೆ.