ಪಾಲಕ್ಕಾಡ್: ವಾಳಯಾರ್ ಪ್ರಕರಣದಲ್ಲಿ ಬಾಲಕಿಯರ ಪೋಷಕರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪೋಷಕರ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಯಿತು.
ತಿರುವನಂತಪುರಂ ಸಿಬಿಐ ಘಟಕವು ಕೊಚ್ಚಿಯ ಸಿಬಿಐ ನ್ಯಾಯಾಲಯದಲ್ಲಿ ಆರೋಪಪಟ್ಟಿಯನ್ನು ಸಲ್ಲಿಸಿದೆ. ಆರು ಪ್ರಕರಣಗಳಲ್ಲಿ ಸಿಬಿಐ ಪೂರಕ ಆರೋಪಪಟ್ಟಿಗಳನ್ನು ಸಲ್ಲಿಸಿದೆ.
ಹುಡುಗಿಯ ಮೇಲೆ ಅತ್ಯಾಚಾರ ನಡೆದಿದೆ ಎಂದು ತಿಳಿದಿದ್ದರೂ, ಪೋಷಕರು ಪೋಲೀಸರಿಗೆ ಮಾಹಿತಿ ನೀಡಿರಲಿಲ್ಲ. ಇದಲ್ಲದೆ, ಪೋಷಕರು ಕಾನೂನು ಕ್ರಮ ಕೈಗೊಳ್ಳಲು ಸಿದ್ಧರಿರಲಿಲ್ಲ. ಇದರ ಆಧಾರದ ಮೇಲೆ ಸಿಬಿಐ ಅವರ ಮೇಲೆ ಆರೋಪ ಹೊರಿಸಿದೆ. ಪೋಷಕರನ್ನು ಎರಡನೇ ಮತ್ತು ಮೂರನೇ ಆರೋಪಿಗಳೆಂದು ಹೆಸರಿಸಿ ಚಾರ್ಜ್‍ಶೀಟ್ ಸಲ್ಲಿಸಲಾಗಿದೆ.
ಹುಡುಗಿಯ ಸಾವು ಕೊಲೆ ಎಂದು ಪೋಷÀಕರು ಈಗಾಗಲೇ ಆರೋಪಿಸಿದ್ದರು. ಆದರೆ, ತನಿಖಾ ತಂಡವು ಅದು ಆತ್ಮಹತ್ಯೆ ಎಂದು ತೀರ್ಮಾನಿಸಿತು. ಇದರ ನಂತರ, ಪೋಷಕರ ಮೇಲೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಹೊರಿಸಿ ಪ್ರಕರಣಕ್ಕೆ ಸೇರಿಸಲಾಯಿತು.
ಅತ್ಯಾಚಾರದ ಬಗ್ಗೆ ಪೋಷಕರಿಗೆ ತಿಳಿದಿದ್ದರೂ, ಅವರು ಪೋಲೀಸರಿಗೆ ಅಥವಾ ಇತರ ಕಾನೂನು ಜಾರಿ ಸಂಸ್ಥೆಗಳಿಗೆ ಮಾಹಿತಿ ನೀಡಲಿಲ್ಲ ಎಂದು ಸಿಬಿಐ ಆರೋಪಪಟ್ಟಿಯಲ್ಲಿ ಹೇಳಲಾಗಿದೆ. ಹುಡುಗಿಯ ಹೆತ್ತವರಿಗೆ ವಿಷಯ ತಿಳಿದ ನಂತರವೂ ಅವರ ಮೇಲೆ ಅತ್ಯಾಚಾರ ಮುಂದುವರೆದಿತ್ತು. ಇದರಿಂದ ಮಾನಸಿಕ ತೊಂದರೆಗೊಳಗಾಗಿ ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.