ಬದಿಯಡ್ಕ: ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ ಮೈಸೂರು ಇವರು ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಭೂಮಿಕಾ ಶೇಕಡಾ 87 ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾಳೆ. ಈಕೆ ವೈಷ್ಣವಿ ನಾಟ್ಯಾಲಯ (ರಿ) ಪುತ್ತೂರು ಇದರ ನಿರ್ದೇಶಕಿಯಾದ ವಿದುಷಿ ಯೋಗೀಶ್ವರೀ ಜಯಪ್ರಕಾಶ್ ಅವರ ಶಿಷ್ಯೆಯಾಗಿದ್ದು, ನೀರ್ಚಾಲು ಸಮೀಪದ ಕೇರ ರಮೇಶ ಹಾಗು ಪ್ರೇಮಲತಾ ಇವರ ಪುತ್ರಿ. ಕುಂಟಿಕಾನ ಹಿರಿಯ ಬುನಾದಿ ಶಾಲೆಯ ಆರನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾಳೆ.