HEALTH TIPS

ಗುವಾಹಟಿ ಐಐಟಿಯಿಂದ ಕ್ಯಾನ್ಸರ್ ಔಷಧ ಅಭಿವೃದ್ಧಿ

 ನವದೆಹಲಿ: ಗುವಾಹಟಿಯ ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯು (ಐಐಟಿ) ಕ್ಯಾನ್ಸರ್‌ ಚಿಕಿತ್ಸೆಗಾಗಿ ಅತ್ಯಾಧುನಿಕ, ಇಂಜೆಕ್ಟ್‌ ಮಾಡಬಹುದಾದ ಹೈಡ್ರೊಜೆಲ್‌ ಅನ್ನು ಅಭಿವೃದ್ಧಿಪಡಿಸಿದೆ. ಈ ಔಷಧದ ಅಡ್ಡಪರಿಣಾಮಗಳು ಕಡಿಮೆ ಇರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೋಲ್ಕತ್ತದ ಬೋಸ್‌ ಇನ್‌ಸ್ಟಿಟ್ಯೂಟ್ ಜತೆಗೂಡಿ ಈ ಸಂಶೋಧನೆ ಮಾಡಲಾಗಿದ್ದು, ಇದನ್ನು ರಾಯಲ್‌ ಸೊಸೈಟಿ ಆಫ್‌ ಕೆಮಿಸ್ಟ್ರಿಯ 'ಮೆಟೀರಿಯಲ್‌ ಹಾರಿಜನ್ಸ್‌' ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

ಪ್ರಾಧ್ಯಾಪಕ ದೇವಪ್ರತಿಮ್‌ ದಾಸ್‌ ಅವರು, 'ಜಗತ್ತಿನಾದ್ಯಂತ ಲಕ್ಷಾಂತರ ಜನರಲ್ಲಿ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ಕಿಮೊಥೆರಪಿ, ಶಸ್ತ್ರಚಿಕಿತ್ಸೆಗೆ ಅವುಗಳದ್ದೇ ಆದ ಮಿತಿಗಳಿವೆ. ಕಿಮೊಥೆರಪಿಯಿಂದ ಸಾಕಷ್ಟು ಅಡ್ಡಪರಿಣಾಮಗಳಿವೆ. ಹೀಗಾಗಿ ಈ ಹೈಡ್ರೊಜೆಲ್‌ ಔಷಧವನ್ನು ಅಭಿವೃದ್ಧಿಪಡಿಸಿದ್ದೇವೆ' ಎಂದು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries