ಮಂಜೇಶ್ವರ: 2025ರ ಆರಂಭದಲ್ಲೇ ಹೊಸ ವರ್ಷ ಫಾತಿಮತ್ ಫರ್ಸಾನಾ ಅವಳ ಕನಸು ನನಸಾಗಿದೆ. ಮನೆಯಲ್ಲಿ ಗೆಳೆಯರೊಂದಿಗೆ ಕುಣಿದು ಕುಪ್ಪಳಿಸುವುದರೊಂದಿಗೆ ತರಗತಿಯಲ್ಲೇ ಓದುವ ಅವಕಾಶವನ್ನು ಅಧಿಕಾರಿಗಳು ಕಲ್ಪಿಸಿದ್ದಾರೆ. ಶಿಕ್ಷಕರನ್ನು ಭೇಟಿಯಾಗಿ ಮತ್ತು ಅವರ ತರಗತಿಗಳನ್ನು ಆಲಿಸುವ ಮೂಲಕ ಕಲಿಯಲು ವರ್ಚುವಲ್ ತರಗತಿಯನ್ನು ಒದಗಿಸಲಾಗಿದೆ. ಸಮಗ್ರ ಶಿಕ್ಷಣ ಕೇರಳ ಕಾಸರಗೋಡು ಮತ್ತು ಸ್ಟಾರ್ಸ್ ಯೋಜನೆಯಲ್ಲಿ ಮಂಜೇಶ್ವರ ಬಿಆರ್ ಸಿ ವ್ಯಾಪ್ತಿಯ ವರ್ಕಾಡಿ ಪಂಚಾಯತಿಯ ಎಸ್. ವಿ. ವಿಎಚ್ ಎಸ್ ಎಸ್ ಕೊಡ್ಲಮೊಗರು ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಫಾತಿಮಾ ಫರ್ಜಾನಾ ಈ ಸೌಲಭ್ಯ ಪಡೆಯುತ್ತಿದ್ದಾರೆ.
10ನೇ ತರಗತಿ ಓದುತ್ತಿರುವ ಫಾತಿಮತ್ ಫರ್ಜಾನಾ ದೈಹಿಕ ದೌರ್ಬಲ್ಯದಿಂದ ಶಾಲೆಗೆ ತೆರಳಿ ವಿದ್ಯಾರ್ಜನೆಗೈಯ್ಯಲು ಸಾಧ್ಯವಾಗದೆ ತನ್ನ ತಂದೆ ತಾಯಿ ಹಾಗೂ ವಿಶೇಷ ಶಿಕ್ಷಕರ ನೆರವಿನಿಂದ ಮನೆಯಲ್ಲಿಯೇ ಗೃಹಾಧಾರಿತ ಶಿಕ್ಷಣವನ್ನು ಮಾಡುತ್ತಿದ್ದಾಳೆ.ವರ್ಚುವಲ್ ತರಗತಿಯ ಸಲಕರಣೆಗಳ ಉಡುಗೊರೆಯೊಂದಿಗೆ, ವಿದ್ಯಾರ್ಥಿಗಳು ಮನೆಯಿಂದಲೇ ತರಗತಿಯ ಕಲಿಕೆಯ ಚಟುವಟಿಕೆಗಳನ್ನು ವೀಕ್ಷಿಸಬಹುದು ಮತ್ತು ಭಾಗವಹಿಸಬಹುದು. ಮುಂದಿನ ದಿನಗಳಲ್ಲಿ ತನ್ನ ಸ್ನೇಹಿತರೊಂದಿಗೆ ಆಟವಾಡಿ ನಗುತ್ತಾ ಕಲಿಕೆಯ ಚಟುವಟಿಕೆಗಳಲ್ಲಿಯೂ ಪಾಲ್ಗೊಳ್ಳುತ್ತಾಳೆ. ಇದಕ್ಕಾಗಿ ಶಾಲೆಯಲ್ಲಿ ಕ್ಯಾಮೆರಾ ಅಳವಡಿಸಲಾಗುವುದು. ಮನೆಯಲ್ಲಿ ಟ್ಯಾಬ್ಲೆಟ್, ಕ್ಯಾಮೆರಾ, ಸ್ಟ್ಯಾಂಡ್ ಮತ್ತು ಮೆಮೊರಿ ಕಾರ್ಡ್ ನೀಡಲಾಯಿತು. ಅದರ ಮೂಲಕ ತರಗತಿಯಲ್ಲಿನ ಎಲ್ಲಾ ಕಲಿಕಾ ಚಟುವಟಿಕೆಗಳನ್ನು ಮನೆಯಲ್ಲೇ ವೀಕ್ಷಿಸಬಹುದಾಗಿದೆ.
ಫರ್ಜಾನಾಳ ಮನೆಯಲ್ಗಿ ನಿನ್ನೆ ನಡೆದ ಸಮಾರಂಭದಲ್ಲಿ ವರ್ಕಾಡಿ ಗ್ರಾಮ ಪಂಚಾಯತಿ ಸದಸ್ಯೆ ಆಶಾಲತಾ, ಮೀಂಜ ಗ್ರಾಮ ಪಂಚಾಯತಿ ಸದಸ್ಯ ಬಾಬು, ಮಂಜೇಶ್ವರ ಎಇಒ ರಾಜಗೋಪಾಲ, ಬಿಪಿಸಿ ಜಾಯ್ ಜಿ, ಎಸ್.ಎಸ್ ವಿ.ವಿ ಎಚ್.ಎಸ್.ಎಸ್ ಕೊಡ್ಲಮೊಗರು ಶಾಲೆಯ ಮುಖ್ಯೋಪಾಧ್ಯಾಯಿನಿ .ಕೃಷ್ಣವೇಣಿ, ಪಿ.ಟಿ.ಎ. ಅಧ್ಯಕ್ಷ ಅಬ್ದುಲ್ ಮಜೀದ್, ಪಿ.ಟಿ.ಎ ಕಾರ್ಯಕಾರಿ ಸದಸ್ಯ ಅಬ್ದುಲ್ ರಝಾಕ್, ವಿಶೇಚ ಶಿಕ್ಷಕಿ ಅನಿತಾ ವೇಗಸ್ ಮತ್ತು ಹಿರಿಯ ಶಿಕ್ಷಕಿ ಆರತಿ ಉಪಸ್ಥಿತರಿದ್ದರು.