ಮುಳ್ಳೇರಿಯ: ಮುಕ್ಕೂರು ಫ್ರೆಂಡ್ಸ್ ಕ್ಲಬ್ ನ ಭಾನುವಾರ ನಡೆದ 12ನೇ ವಾರ್ಷಿಕೋತ್ಸವದ ಸಂಧರ್ಭ ಸುಬ್ರಾಯ ಆಚಾರ್ಯ ಚಳ್ಳಂತ್ತಡ್ಕರಿಗೆ ಮುಕ್ಕೂರು ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಹಲವು ದಶಕಗಳಿಂದ ಕಮ್ಮಾರ ವೃತ್ತಿಯನ್ನು ಪ್ರಾಮಾಣಿಕವಾಗಿ ನಡೆಸಿ, ಹಲವು ದೈವ-ದೇವಸ್ಥಾನಗಳಿಗೆ ಆಯುಧಗಳು, ಕೃಷಿ ಸಲಕರಣೆಗಳನ್ನು ನಿರ್ಮಿಸುತ್ತಿರುವ ಕಮ್ಮಾರ ವೃತ್ತಿಯಲ್ಲಿನ ಜೀವಮಾನ ಸಾಧನೆಗಾಗಿ ಮುಕ್ಕೂರು ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಾಲಕೃಷ್ಣ ರೈ, ಚನಿಯಪ್ಪ ಪೂಜಾರಿ, ಪ್ರಕಾಶ್, ದಿನೇಶ್, ಅಮೃತ್ ರಾಜ್ ರೈ, ಕೃಷ್ಣಪ್ಪ ಈ ಸಂದರ್ಭ ಉಪಸ್ಥಿತರಿದ್ದರು.